ಪ್ರೊ ಕಬಡ್ಡಿ ಪಂದ್ಯಾವಳಿಯ 92ನೇ ಲೀಗ್ ಪಂದ್ಯದಲ್ಲಿ ಹರಿಯಾಣಾ ಸ್ಟೀಲರ್ಸ್ ತಂಡ, ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ 17 ಅಂಕಗಳ ಭಾರೀ ಅಂತರದ ಜಯ ದಾಖಲಿಸಿತು.
ಈ ಗೆಲುವಿನೊಂದಿಗೆ ಹರಿಯಾಣ ಸ್ಟೀಲರ್ಸ್ ಆಡಿದ 16 ಪಂದ್ಯಗಳಲ್ಲಿ 7 ಜಯ, 6 ಸೋಲು, 3 ಡ್ರಾ ಸಾಧಿಸಿದ್ದು 48 ಅಂಕ ಕಲೆ ಹಾಕಿದೆ. ಈ ಸೋಲಿನೊಂದಿಗೆ ಬೆಂಗಾಲ್ ವಾರಿಯರ್ಸ್ 16 ಪಂದ್ಯಗಳಲ್ಲಿ 41 ಅಂಕ ಸೇರಿಸಿದ್ದು, 10ನೇ ಸ್ಥಾನದಲ್ಲಿದೆ.
ಹರಿಯಾಣಾ ಸ್ಟೀಲರ್ಸ್ ತಂಡ 46 ಅಂಕ ಕಲೆಹಾಕಿದರೆ, ಬೆಂಗಾಲ್ ವಾರಿಯರ್ಸ್ ತಂಡ 29 ಅಂಕ ಸೇರಿಸಿತು. ವಿರಾಮD ವೇಳೆ ಪಂದ್ಯ 19-19 ಅಂಕಗಳಿಂದ ಸಮಸ್ಥಿತಿಯಲ್ಲಿತ್ತು.
ವಿಜಯಿ ಹರಿಯಾಣಾ ಸ್ಟೀಲರ್ಸ್ ತಂಡದ ಪರ ರೈಡರ್ ವಿಕಾಸ್ ಕಂಡೋಲಾ ಹತ್ತು, ವಿನಯ್ ಎಂಟು, ಅಶೀಸ್ ಆರು, ಡಿಫೆಂಡರ್ ಮೋಹಿತ್ ಮೂರು, ರವಿಕುಮಾರ್ ಮೂರು, ಹಾಗೂ ಜೈದೀಪ್ ಎರಡು ಅಂಕ ಕಲೆಹಾಕಿದರು.
ಪರಾಜಿತ , ಬೆಂಗಾಲ್ ವಾರಿಯರ್ಸ್ ತಂಡದ ಪರ ರೈಡರ್ ಮಣೀಂದರ್ ಸಿಂಗ್ ಹದಿಮೂರು, ಮೊಹಮ್ಮದ್ ನಾಲ್ಕು ಹಾಗೂ ಆಲ್‌ರೌಂಡರ್ ರಾಣಾ ಸಿಂಗ್ ನಾಲ್ಕು ಅಂಕ ಗಳಿಸಿದರು.