Monday, June 5, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

LSGvsKKR ಪ್ಲೇ ಆಫ್ಗೆ ಅರ್ಹತೆ ಪಡೆಯುತ್ತಾ ಲಖನೌ ? 

LSGvsKKR ಪ್ಲೇ ಆಫ್ಗೆ ಅರ್ಹತೆ ಪಡೆಯುತ್ತಾ ಲಖನೌ ? 

May 20, 2023
in Cricket, ಕ್ರಿಕೆಟ್
LSGvsKKR ಪ್ಲೇ ಆಫ್ಗೆ ಅರ್ಹತೆ ಪಡೆಯುತ್ತಾ ಲಖನೌ ? 

Kolkata: Lucknow Super Giants cricketers play football during a training session on the eve of the IPL 2023 cricket match against Kolkata Knight Riders, at Eden Gardens in Kolkata, Friday, May 19, 2023. (PTI Photo/Swapan Mahapatra)(PTI05_19_2023_000142B)

Share on FacebookShare on TwitterShare on WhatsAppShare on Telegram

ಪ್ಲೇ ಆಫ್ ಕನಸು ಕಾಣುತ್ತಿರುವ ಲಖನೌ ಸೂಪರ್ ಜೈಂಟ್ಸ್ ಇಂದು ಡು ಆರ್ ಡೈ ಮ್ಯಾಚ್‍ನಲ್ಲಿ  ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯಿಂದ ಹೊರ ಬಿದ್ದಿರುವ ಕೋಲ್ಕತ್ತಾ ಲೀಗ್‍ಗನ ಕೊನೆಯ ಪಂದ್ಯ ಆಡಲಿದೆ.

ಈಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಂದಿನ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ತಂಡಕ್ಕೆ ತವರಿನ ಲಾಭ ಇದ್ದರೂ ತಂಡದಲ್ಲಿರುವ ಸಮಸ್ಯೆ ತಂಡವನ್ನು ಕಾಡುತ್ತಿದೆ. ಸೂಕ್ತ ಹನ್ನೊಂದರ ಬಳಗವನ್ನು ಹುಡುಕುವುದರಲ್ಲಿ ಎಡವಿದೆ.

ಟೂರ್ನಿಯಲ್ಲಿ 7 ಸೋಲುಗಳನ್ನು ಕಂಡಿರುವ ಕೆಕೆಆರ್ ತವರಿನಲ್ಲಿ 4 ಪಂದ್ಯಗಳನ್ನು ಕೈಚೆಲ್ಲಿದೆ. ಬ್ಯಾಟಿಂಗ್‍ನಲ್ಲಿ ಸುಧಾರಿಸಕೊಳ್ಳಬೇಕಿದೆ. ಬೌಲಿಂಗ್‍ನಲ್ಲಿ ಅನುಭವದ ಕೊರೆತೆ ಎದ್ದು ಕಾಣುತ್ತಿದೆ. ಎರಡು ಬಾರಿ ಚಾಂಪಿಯನ್ ಕೋಲ್ಕತ್ತಾ ಪ್ಲೇ ಆಫ್ಗೆ ಅರ್ಹತೆ ಪಡೆಯುವಲ್ಲಿ ಈ ಬಾರಿಯೂ ಎಡವಿದೆ.

ರಾಜಸ್ಥಾನ ಮತ್ತು ಗುಜರಾತ್ ವಿರುದ್ಧ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಿ ಕ್ರಮವಾಗಿ 179 ಮತ್ತು 149 ರನ್‍ಗಳನ್ನು ಹೊಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಕೋಲ್ಕತ್ತಾ  ಆಡಿದ ಪಿಚ್‍ನಲ್ಲಿ  ಚೆನ್ನೈ ಮತ್ತು ಸನ್‍ರೈಸರ್ಸ್ ತಂಡಗಳು ಕ್ರಮವಾಗಿ 235 ಮತ್ತು 228 ರನಗಳನ್ನು ಚಚ್ಚಿದ್ದವು.

ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರುಗಳ ನೆರವಿನಿಂದ ಟೂರ್ನಿಯನ್ನು ಜೀವಂತವಾಗಿರಿಸಿಕೊಳ್ಳಲು ಅವಕಾಶವಿದ್ದು ಪವಾಡ ಮಾಡಿಯೇ ಗೆಲ್ಲಬೇಕಿದೆ.  ನಾಲ್ಕು ತಂಡಗಳು 14 ಅಂಕಗಳನ್ನು ಪಡೆಯಬಹುದಾಗಿದ್ದು ಹೆಚ್ಚು ನೆಟ್ ರನ್ ರೇಟ್ ಇರುವ ತಂಡ ಪ್ಲೇ ಆಫ್ಗೆ ಲಗ್ಗೆ ಹಾಕಲಿದೆ.

12 ಅಂಕಗಳನ್ನು ಪಡೆದಿರುವ ಕೆಕೆಆರ್ ಮುಂದಿನ ಪಂದ್ಯ ಗೆಲ್ಲುವುದು ಮಾತ್ರವಲ್ಲ ಪಂಜಾಬ್, ಗುಜರಾತ್ ಮತ್ತು ಸನ್‍ರೈಸರ್ಸ್ ತಂಡಗಳ ಪ್ರದರ್ಶನವನ್ನು ನೆಚ್ಚಿಕೊಳ್ಳಬೇಕಿದೆ.

ಇನ್ನು ಲಖನೌ ತಂಡ ಹಚ್ಚೇನು ಲೆಕ್ಕಾಚಾರ ಮಾಡಬೇಕಿಲ್ಲ. ಕೆಕೆಆರ್ ವಿರುದ್ಧ ಗೆದ್ದರೆ ಸಾಕು ಪ್ಲೇಆಫ್ಗೆ ನೇರ ಪ್ರವೇಶ ಪಡೆಯಲಿದೆ. ಮೇಲ್ನೋಟಕ್ಕೆ  ಲಖನೌ ತಂಡ ಬಲಿಷ್ಠವಾಗಿದ್ದು ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ನಾಯಕ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಣಾಲ್ ಪಾಂಡ್ಯ ಸಹಜ ನಾಯಕರಂತೆ ಕಾಣುತ್ತಾರೆ. ಮುಂಬೈ ಇಂಡಿಯನ್ಸ್ ವಿರುದ್ಧ  ರೋಚವಾಗಿ ಗೆದ್ದಿದ್ದು ಅವರಲ್ಲಿ ಚಾಣಾಕ್ಷ ನಾಯಕನಿರುವುದು ಕಂಡುಬರುತ್ತದೆ.

ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ತಂಡದ ಆಪಾದ್ಬಾಂಧವರಾಗಿದ್ದಾರೆ. ಮುಂಬೈ ವಿರುದ್ಧ 89 ರನ್ ಹೊಡೆದು ಗೆಲುವಿನ ರೂವಾರಿಯಾಗಿದ್ದರು.  ಮೊಹ್ಸಿನ್ ಖಾನ್ ಮಿಂಚುತ್ತಿದ್ದು ರವಿಬಿಷ್ಣೋಯಿ ನಿಧಾನಗತಿಯ ಪಿಚ್‍ನಲ್ಲಿ ಸ್ಪಿನ್ ಮ್ಯಾಜಿಕ್ ಮಾಡಬಹುದಾಗಿದೆ.

ಬಗಾನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಲಖನೌ 

ಕೋಲ್ಕತ್ತಾ ವಿರುದ್ಧದ ಇಂದಿನ ಪಂದ್ಯದಲ್ಲಿ  ಲಖನೌ ಸೂಪರ್ ಜೈಂಟ್ಸ್ ತಂಡ ದೇಶದ ಹಳೆಯ ಫುಟ್ಬಾಲ್ ಕ್ಲಬ್‍ಗಳಲ್ಲಿ ಒಂದಾದ ಮೋಹನ್ ಬಗಾನ್ನ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಐತಿಹಾಸಿಕ ಫುಟ್ಬಾಲ್ ಕ್ಲಬ್‍ಗೆ ಗೌರವ ಸಲ್ಲಿಸುವುದಕ್ಕಾಗಿ ಈ ನಿರ್ಧಾರ ಕೈಗೊಂಡಿದೆ.

 

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: IPL Season 16Kolkatta Knight RidersLSGvsKKRLucknow Super GiantsMatch PreviewSports Karnataka
ShareTweetSendShare
Next Post
CSKvsDC ಪ್ಲೇ ಆಫ್ಗೆ ಲಗ್ಗೆ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್

CSKvsDC ಪ್ಲೇ ಆಫ್ಗೆ ಲಗ್ಗೆ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್

Leave a Reply Cancel reply

Your email address will not be published. Required fields are marked *

Stay Connected test

Recent News

Ranji Trophy 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪುಜಾರ ಮತ್ತೊಂದು ಮೈಲುಗಲ್ಲು

WTC Final: ಇಂಗ್ಲೆಂಡ್‌ ಅಂಗಳದಲ್ಲಿ ಚೇತೇಶ್ವರ್‌ ಪುಜಾರ ಟೆಸ್ಟ್‌ ದಾಖಲೆ ಹೇಗಿದೆ?

June 5, 2023
WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

WTC Final: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ನೆಚ್ಚಿನ ತಂಡ: ವಾಸಿಂ ಅಕ್ರಮ್

June 5, 2023
WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

WTC Final: ಆಸೀಸ್‌ ಚಾಲೆಂಜ್‌ ಎದುರಿಸಲು ಭಾರತ ಸಜ್ಜು: ಓವಲ್‌ ಅಂಗಳಕ್ಕೆ ಬಂದಿಳಿದ ರೋಹಿತ್‌ ಪಡೆ

June 5, 2023
IND v AUS 2nd Test: ಶಮಿ, ಜಡೇಜಾ, ಅಶ್ವಿನ್‌ ದಾಳಿಗೆ ಆಸೀಸ್‌ ತತ್ತರ: ಮೊದಲ ಇನ್ನಿಂಗ್ಸ್‌ನಲ್ಲಿ 263ಕ್ಕೆ ಆಲೌಟ್‌

WTC FINAL: ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram