ಪಂದ್ಯ ಯಾವುದು ಬೇಕಾದರೂ ಆಗಿರಲಿ. ರಣತಂತ್ರಗಳಿಗೆ ಬೇರೆಯದ್ದೇ ಮಹತ್ವ ಇರುತ್ತದೆ. ಐಪಿಎಲ್ನಲ್ಲಂತೂ ಪ್ರತಿಯೊಬ್ಬ ಆಟಗಾರನಿಗೂ ವಿಶೇಷ ರಣತಂತ್ರಗಳು ಸಜ್ಜಾಗಿರುತ್ತವೆ. ಪ್ಲೇ-ಆಫ್ ಟಾರ್ಗೆಟ್ ಮಾಡಿರುವ ಸನ್ ರೈಸರ್ಸ್ ಸಿಎಸ್ಕೆ ವಿರುದ್ಧ ವಿಭಿನ್ನ ರಣತಂತ್ರವನ್ನು ಮಾಡಿದೆ.
ಧೋನಿ ಲೈಕ್ಸ್ಇಟ್…!
- ವೇಗದ ಬೌಲರ್ ಗಳನ್ನು ಎದುರಿಸುವುದು ಅಂದರೆ ಮಹೇಂದ್ರ ಸಿಂಗ್ ಧೋನಿಗೆ ಬಹು ಇಷ್ಟ. ಈ ಬಾರಿಯ ಐಪಿಎಲ್ನಲ್ಲಿ ಧೋನಿ ವೇಗದ ಬೌಲರ್ ಗಳ 67 ಎಸೆತಗಳ ಎದುರು 163 ರ ಸ್ಟ್ರೈಕ್ ರೇಟ್ ನಲ್ಲಿ 109 ರನ್ ಗಳಿಸಿದ್ದಾರೆ.
- ಭುವನೇಶ್ವರ್ ಕುಮಾರ್ ವಿರುದ್ಧ ಚೆನ್ನೈ ನಾಯಕ ಉತ್ತಮ ದಾಖಲೆ ಹೊಂದಿದ್ದಾರೆ. ಐಪಿಎಲ್ ನಲ್ಲಿ ಭುವಿ ಎದುರು ಆಡಿದ 11 ಇನ್ನಿಂಗ್ಸ್ ಗಳಲ್ಲಿ ಧೋನಿ ಔಟ್ ಆಗಿಲ್ಲ. ಅಷ್ಟೇ ಅಲ್ಲ 165ರ ಸ್ಟ್ರೈಕ್ ರೇಟ್ ನಲ್ಲಿ 94 ರನ್ ಕೂಡ ಸಿಡಿಸಿದ್ದಾರೆ.
ನಂಬರ್ ಗೇಮ್:
- ಈ ಬಾರಿಯ ಐಪಿಎಲ್ನಲ್ಲಿ 50 ಮತ್ತು ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಬ್ಯಾಟ್ಸ್ ಮನ್ಗಳ ಪೈಕಿ ರುತುರಾಜ್ ಗಾಯಕ್ವಾಡ್ ಅತ್ಯಂತ ಕಡಿಮೆ ಸರಾಸರಿ ಹೊಂದಿದ್ದಾರೆ. ಗಾಯಕ್ವಾಡ್ ಕೇವಲ 12.8 ಸರಾಸರಿ ಹೊಂದಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಸರಾಸರಿ 15.8 ರಷ್ಟು ಮಾತ್ರ ಇದೆ.
- ಸನ್ ರೈಸರ್ಸ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ 53.3 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
- ಏಡಿಯನ್ ಮಾರ್ಕ್ ರಾಂ ಕಳೆದ 6 ಐಪಿಎಲ್ ಇನ್ನಿಂಗ್ಸ್ ಗಳ ಪೈಕಿ 4 ಬಾರಿ 40 ಮತ್ತು ಅಧಿಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.