cricket news – ICC Women’s T20I rankings – ಅಗ್ರ ಸ್ಥಾನಕ್ಕೇರಿದ ಶಫಾಲಿ ವರ್ಮಾ, ಟಾಪ್ ಟೆನ್ ನಲ್ಲಿ ಕಾಣಿಸಿಕೊಂಡ ದೀಪ್ತಿ ಶರ್ಮಾ
ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಐಸಿಸಿ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹೊಡಿ ಬಡಿ ಆಟವನ್ನೇ ಮೂಲ ಮಂತ್ರವನ್ನಾಗಿಸಿಕೊಂಡಿರುವ ಶಫಾಲಿ ವರ್ಮಾ ಅವರು ವಿಶ್ವ ಕ್ರಿಕೆಟ್ ನಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಬೆಥ್ ಮೂನಿ ಮತ್ತು ಮೆಗ್ ಲಾನಿಂಗ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕದಲ್ಲಿದ್ದಾರೆ.
cricket news – ICC Women’s T20I rankings Shafali Verma regains No. 1 spot
ಇನ್ನು ಶಫಾಲಿ ವರ್ಮಾ ಅವರ ಜೊತೆಗಾರ್ತಿ ಸ್ಮøತಿ ಮಂದಾನ ಅವರು ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ. ಮಂದಾನ ಅವರು ಶ್ರೇಯಾಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ನ್ಯೂಜಿಲೆಂಡ್ ನ ಸೋಫಿ ಡೆವಿನ್ ಐದನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಆಲ್ಯಾಸ ಹೀಲಿ ಅವರು ಆರು ಮತ್ತು ನ್ಯೂಜಿಲೆಂಡ್ ನ ಸೂಝಿ ಬ್ಯಾಟೆಸ್ ಅವರು ಏಳನೇ ಸ್ಥಾನದಲ್ಲಿದ್ದಾರೆ.
ಹಾಗೇ ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ನ ಸೋಫಿ ಎಕ್ಲೆಸ್ಟೋನ್ ಮತ್ತು ಸರಾಹ್ ಗ್ಲೇನ್ ಅವರು ಮೊದಲ ಎರಡು ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಾಬಿನಮ್ ಇಸ್ನಾಮೇಲ್ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ದೀಪ್ತಿ ಶರ್ಮಾ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಲ್ ರೌಂಡ್ ವಿಭಾಗದಲ್ಲಿ ಸೋಫಿ ಡೆವೆನ್ ಮತ್ತು ನಟಾಲಿ ಸ್ಕೀವರ್ ಅವರು ಮೊದಲ ಎರಡು ಸ್ಥಾನದಲ್ಲಿದ್ರೆ, ದೀಪ್ತಿ ಶರ್ಮಾಋ ಅವರು ಮೂರನೇ ಸ್ಥಾನದಲ್ಲಿದ್ದಾರೆ.