Australian Open 2022 – ಸೆಮಿಫೈನಲ್ ಪ್ರವೇಶಿಸಿದ ಡೆನಿಯಲ್ ಕಾಲಿನ್ಸ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಡೆನಿಯೆಲ್ ಕಾಲಿನ್ಸ್ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್‍ನ ರಾಡ್ ಲಾವೆರ್ ಆರೆನಾ ಅಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನಿಯೆಲ್ ಕಾಲಿನ್ಸ್ ಅವರು ಆಲಿಝ್ ಕಾರ್ನೆಟ್ ಅವರನ್ನು ಪರಾಭವಗೊಳಿಸಿದ್ರು.
ಮೊದಲ ಸೆಟ್ ನಲ್ಲಿ ಕಾಲಿನ್ಸ್ ಮತ್ತು ಕಾರ್ನೆಟ್ ಅವರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ರು. ಅಂತಿಮವಾಗಿ ಕಾಲಿನ್ಸ್ ಅವರು 7-5ರಿಂದ ಸೆಟ್ ಗೆದ್ದುಕೊಂಡು ಮುನ್ನಡೆ ಪಡೆದುಕೊಂಡ್ರು.
ಆದ್ರೆ ಎರಡನೇ ಸೆಟ್ ನಲ್ಲಿ ಕಾಲಿನ್ಸ್ ಅವರು ಅಮೋಘ ಆಟವನ್ನೇ ಪ್ರದರ್ಶಿಸಿದ್ರು. ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿಕೊಂಡ ಕಾಲಿನ್ಸ್ ಅವರು ಕಾರ್ನೆಟ್ ಅವರನ್ನು ಮಂಕಾಗುವಂತೆ ಮಾಡಿದ್ರು. ಪರಿಣಾಮ ಕಾಲಿನ್ಸ್ ಎರಡನೇ ಸೆಟ್ ಅನ್ನು 6-1ರಿಂದ ಗೆದ್ದುಕೊಂಡು ನಾಲ್ಕರ ಘಟ್ಟ ತಲುಪಿದ್ರು.
Australian Open 2022 – Collins ends Cornet run to reach semis
ಅಂದ ಹಾಗೆ ಆಲೀಝ್ ಕಾರ್ನೆಟ್ ಅವರು ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವುದು.
ಸೆಮಿಫೈನಲ್ ನಲ್ಲಿ ಡೆನಿಯಲ್ ಕಾಲಿನ್ಸ್ ಅವರು ಐಗಾ ಸ್ವಿಟೆಕ್ ಅಥವಾ ಕೈಯ್ ಕಾನೆಪಿ ಅವರನ್ನು ಎದುರಿಸಲಿದ್ದಾರೆ.