ಕಬಡ್ಡಿ ಆಟದ ಸೂಪರ್ ಲೀಗ್ ಅಂತ ಕರೆಸಿಕೊಳ್ಳುವ ಪ್ರೊ ಕಬಡ್ಡಿ ಸೀಸನ್ 2021 ಡಿಸೆಂಬರ್ 22ರಿಂದ ಆರಂಭವಾಗಲಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಪ್ರೊ ಕಬ್ಬಡ್ಡಿ ಟೂರ್ನಿ ರದ್ದಾಗಿತ್ತು. ಈ ಬಾರಿ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಲೀಗ್ ನಡೆಯಲಿದೆ. ಡಿಸೆಂಬರ್ 22ರಿಂದ ಪಂದ್ಯಗಳು ನಡೆಯಲಿವೆ.
8ನೇ ಸೀಸನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿವೆ. ಪ್ರತಿದಿನ ಮೂರು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಸಂಜೆ 7:30 ಕ್ಕೆ ಶುರುವಾದರೆ, ಎರಡನೇ ಪಂದ್ಯವು ರಾತ್ರಿ 8:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕೊನೆಯ ಪಂದ್ಯವು ರಾತ್ರಿ 9:30 ಕ್ಕೆ ಆರಂಭವಾಗಲಿದೆ.
ಇನ್ನು ಮೊದಲಾರ್ಧದಲ್ಲಿ ಒಟ್ಟು ಏಳು ಟ್ರಿಪಲ್ ಹೆಡರ್ಗಳು ನಡೆಯಲಿದ್ದು, ಮೊದಲ ದಿನದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವು ತಮಿಳ್ ತಲೈವಾಸ್ ವಿರುದ್ಧ ಸೆಣಸಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಯುಪಿ ಯೋಧಾ ವಿರುದ್ಧ ಆಡಲಿದೆ. ಒಟ್ಟಿನಲ್ಲಿ ಕಬಡ್ಡಿಯ ರಣ ರೋಚಕ ಕಾಳಗಕ್ಕೆ ವೇದಿಕೆ ಫಿಕ್ಸ್ ಆಗಿದೆ.