Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಆಟಕ್ಕೆ ನಿಂತ್ರೆ ವಯಸ್ಸು ಲೆಕ್ಕಕ್ಕಿಲ್ಲ, ಡ್ಯಾಡಿಸ್​​ ಆರ್ಮಿಗಿಂತ ಚಾಣಾಕ್ಯರು ​ ಬೇರೆ ಇಲ್ಲ..!

March 9, 2022
in Cricket, ಕ್ರಿಕೆಟ್
csk ipl sports karnataka

csk ipl sports karnataka

Share on FacebookShare on TwitterShare on WhatsAppShare on Telegram

ಓಲ್ಡ್​​ ಡ್ಯಾಡಿಸ್​​​ ಆರ್ಮಿ​. ಹೀಗಂತ ಚೆನ್ನೈ ಸೂಪರ್​​ ಕಿಂಗ್ಸ್​​ ಅನ್ನು ಕರೆಯುವುದು ಮಾಮೂಲಿ. ಆದರೆ ಈ ಓಲ್ಡ್​​ ಡ್ಯಾಡಿಗಳು ಆಟಕ್ಕೆ ನಿಂತರೆ ಯುವಕರನ್ನು ಕಿರು ಬೆರಳಿನಲ್ಲಿ ತಿರುಗಿಸುತ್ತಾರೆ. ತಂತ್ರ-ಪ್ರತಿತಂತ್ರಗಳಲ್ಲಿ ಈ ಡ್ಯಾಡಿಸ್​​ ಆರ್ಮಿಗೆ ಸವಾಲು ಹಾಕುವವರೇ ಇಲ್ಲ.

ಸಮಸ್ಯೆಗಳು ಸಾಮಾನ್ಯ. ಆದರೆ ಸಮಸ್ಯೆಗಳನ್ನು ಮರೆಮಾಚಿ ಆಡುವುದು ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಬಿಗ್ಗೆಸ್ಟ್​​ ಅಡ್ವಾಂಟೇಜ್​​.  ಮೈದಾನದಲ್ಲಿ ಫೀಲ್ಡಿಂಗ್​​​ ಸ್ಲೋ ಆಗಿರಬಹುದು, ಆದರೆ ಅಟಿಟ್ಯುಡ್​​ ಮಾತ್ರ ಎಂದಿಗೂ ನಿಧಾನವಾಗುವುದಿಲ್ಲ. ಕೆಲ ಹೊಸ ಆಟಗಾರರು 4 ಬಾರಿಯ ಚಾಂಪಿಯನ್​​ ತಂಡ ಶಕ್ತಿ ಹೆಚ್ಚಿಸಿದ್ದಾರೆ.

ಚೆನ್ನೈ ಸಂಭಾವ್ಯ XI

  1. ರುತುರಾಜ್​​ ಗಾಯಕ್ವಾಡ್​​
  2. ಮೊಯಿನ್​​ ಅಲಿ
  3. ರಾಬಿನ್​​ ಉತ್ತಪ್ಪ
  4. ಅಂಬಟಿ ರಾಯುಡು
  5. ಎಂ.ಎಸ್​.ಧೋನಿ
  6. ರವೀಂದ್ರ ಜಡೇಜಾ
  7. ಡ್ವೈನ್​​ ಬ್ರಾವೋ
  8. ದೀಪಕ್​​ ಚಹರ್​​
  9. ರಾಜ್​​ವರ್ಧನ್​​ ಹಂಗರ್ಗೇಕರ್
  10. ಡ್ವೈನ್​​ ಪ್ರಿಟೋರಿಯಸ್​​/ ಆ್ಯಡಂ ಮಿಲ್ನೆ
  11. ಕ್ರಿಸ್​​ ಜೋರ್ಡಾನ್​​​​/ ಮಿಚೆಲ್​​ ಸ್ಯಾಂಟ್ನರ್​​

ಚೆನ್ನೈ ತಂಡಕ್ಕೆ ರೆಡಿಮೇಡ್​​ ಆಟಗಾರರಿದ್ದಾರೆ. ರುತುರಾಜ್​​ ಗಾಯಕ್ವಾಡ್​​ ಸರ್ವ ಋತು ಪ್ರದರ್ಶನ ನೀಡುವ ಆಟಗಾರ. ಫಾಫ್​​ ಡು ಪ್ಲೆಸಿಸ್​​ ಇಲ್ಲದ ಕಾರಣ ಮೊಯಿನ್​​ ಅಲಿಗೆ ಓಪನರ್​ ಆಗಿ ಪ್ರೊಮೋಷನ್​​ ಸಿಗಲಿದೆ. ಮೊಯಿನ್​​ ಕ್ಲಿಕ್​​ ಆಗಿಲ್ಲವಾದರೆ ಡೆವೊನ್​​ ಕಾನ್ವೆ ಅನ್ನುವ ಟಿ20 ಕ್ರಿಕೆಟ್​​ನ ರನ್​​ ಬೇಟೆಗಾರನಿದ್ದಾನೆ. ಸಿಎಸ್​​ಕೆ ಲೆಫ್ಟ್​​-ರೈಟ್​​ ಕಾಂಬಿನೇಷನ್​​ ಕೂಡ ಸಿಗಲಿದೆ. ರಾಬಿನ್​ ಉತ್ತಪ್ಪ ವನ್​​ ಡೌನ್​​ನಲ್ಲಿ ಪ್ಯಾಡ್​​ ಕಟ್ಟಲಿದ್ದಾರೆ. ಒಂದು ವೇಳೆ ಉತ್ತಪ್ಪ ವೈಫಲ್ಯ ಕಂಡರೆ ಸಿಮರ್​​ ಜಿತ್​​ ಸಿಂಗ್​ ಅನ್ನುವ ಯುವ ಆಟಗಾರ ರೆಡಿಯಾಗಿದ್ದಾನೆ. ಶಿವಂ ದುಬೆ ಕೂಡ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಅಂಬಟಿ ರಾಯುಡು,  ನಾಯಕ ಧೋನಿ ಮತ್ತು ರವೀಂದ್ರ ಜಡೇಜಾ ಪ್ರೂವ್​ ಮಾಡಲು ಏನೂ ಉಳಿದಿಲ್ಲ. ಕ್ರಿಕೆಟ್​ನಿಂದ ದೂರ ಇದ್ದರೂ ರಾಯುಡು ಮತ್ತು ಧೋನಿ ಕಸುವು ಕಡಿಮೆ ಆಗಿಲ್ಲ. ಜಡೇಜಾ ಈಗ ರಾಕ್​​ ಸ್ಟಾರ್ ಜಡೇಜಾ ಆಗಿದ್ದಾರೆ. ಚಹರ್​​, ಬ್ರಾವೋ ಮತ್ತು ಅಂಡರ್​ 19 ಕಿಂಗ್​​ ರಾಜ್​​ವರ್ಧನ್​ ಹಂಗರ್ಗೇಕರ್​​​ ಕೆಳ ಸರದಿಯಲ್ಲಿ ಇನ್ನಿಂಗ್ಸ್​​​​ ಫಿನಿಷ್​ ಮಾಡಬಲ್ಲರು. ಡ್ವೈನ್​​ ಪ್ರಿಟೋರಿಯಸ್​​ , ಆ್ಯಡಂ ಮಿಲ್ನೆ, ಕ್ರಿಸ್​​ ಜೋರ್ಡಾನ್​​ ಮತ್ತು ಮಿಚೆಲ್​​ ಸ್ಯಾಂಟ್ನರ್​​ ಸ್ಥಾನ ಕೆಲ ಪಂದ್ಯಗಳಲ್ಲಿ ಬದಲಾಗಬಹುದು.

ಬೌಲಿಂಗ್​​ ಕೂಡ ಸಿಎಸ್​​ಕೆ ಸಮಸ್ಯೆ ಇಲ್ಲ. ಚಹರ್​​ ಮತ್ತು ರಾಜ್​​ ವರ್ಧನ್​​ ಹೊಸ ಚೆಂಡು ಹಂಚಿಕೊಳ್ಳಬಲ್ಲರು. ಜಡೇಜಾ ಮತ್ತು ಮೊಯಿನ್​​ ಸ್ಪಿನ್​​ ಲಾಭ ತಂಡಕ್ಕೆ ಸಿಗಲಿದೆ. ಬ್ರಾವೋ ಡೆತ್​​ ಓವರ್​​ ಸ್ಪೆಷಲಿಸ್ಟ್​. ಇವರಿಗೆ ಸಾಥ್​​ ನಿಡಲು  ಮಿಲ್ನೆ, ಪ್ರಿಟೋರಿಯಸ್​​ ಅಥವಾ ಜೋರ್ಡಾನ್​​​ ಸಜ್ಜಾಗುತ್ತಿದ್ದಾರೆ.

ಡ್ಯಾಡಿಸ್​​ ಆರ್ಮಿಯಲ್ಲಿ ಫೀಲ್ಡಿಂಗ್​​ ನಲ್ಲಿ ವೇಗವಿಲ್ಲ. ಆದರೆ ಕ್ಯಾಚ್​​ ಬಿಟ್ಟು ಮ್ಯಾಚ್​​ ಬಿಡುವವರೂ ಅಲ್ಲ. ಅವಕಾಶಕ್ಕಾಗಿ ಕಾಯದೆ, ಅವಕಾಶ ಮಾಡಿಕೊಂಡು ಆಡುವುದೇ ಚೆನ್ನೈ ಸೂಪರ್​​ ಕಿಂಗ್ಸ್​​ ಯಶಸ್ಸಿನ ಗುಟ್ಟು.

 

 

 

6ae4b3ae44dd720338cc435412543f62?s=150&d=mm&r=g

admin

See author's posts

Tags: Chennai Super KingsCSK\ipl 2022IPL seASON 15
ShareTweetSendShare
Next Post
Sunrisers Hyderabad ipl 2022 sports karnataka

SRH IPL 2022 Schedule - ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಳಾಪಟ್ಟಿ ಹೀಗಿದೆ.. ಮೊದಲ ಎದುರಾಳಿ ರಾಜಸ್ತಾನ ರಾಯಲ್ಸ್..!

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram