Chennai Super Kings – 4 ಮಂದಿಗೆ 42 ಕೋಟಿ.. 21 ಮಂದಿಗೆ 45.5 ಕೋಟಿ..ಇದು ಸಿಎಸ್ ಕೆ ತಂಡದ ಮಹಿಮೆ..!
![Chennai Super Kings - 4 ಮಂದಿಗೆ 42 ಕೋಟಿ.. 21 ಮಂದಿಗೆ 45.5 ಕೋಟಿ..ಇದು ಸಿಎಸ್ ಕೆ ತಂಡದ ಮಹಿಮೆ..! 3 csk ipl 2022 sports karnataka](http://sportskarnataka.com/wp-content/uploads/2022/02/csk-3.jpg)
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಲೆಕ್ಕಚಾರ ಹಾಕೊಂಡು ತಂಡವನ್ನು ಕಟ್ಟಿದೆ.
ಬಿಡ್ಡಿಂಗ್ ನಲ್ಲಿ ಪಕ್ಕಾ ಲೆಕ್ಕಚಾರ ಹಾಕೊಂಡು 25 ಮಂದಿಯನ್ನು ಆಯ್ಕೆ ಮಾಡಿದೆ. ಇದರಲ್ಲಿ ಎಂಟು ಮಂದಿ ವಿದೇಶಿ ಆಟಗಾರರು ಮತ್ತು 17 ಮಂದಿ ಭಾರತದ ಆಟಗಾರರು ಇದ್ದಾರೆ.
ದೀಪಕ್ ಚಾಹರ್ ತಂಡದ ದುಬಾರಿ ಆಟಗಾರನಾಗಿದ್ದಾರೆ. ಚಾಹರ್ ಅವರನ್ನು 14 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಇನ್ನುಳಿದಂತೆ ಅಂಬಟಿ ರಾಯುಡು, ರಾಬಿನ್ ಉತ್ತಪ್ಪ ಮತ್ತು ಡ್ವೇನ್ ಬ್ರೇವೋ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ.
![Chennai Super Kings - 4 ಮಂದಿಗೆ 42 ಕೋಟಿ.. 21 ಮಂದಿಗೆ 45.5 ಕೋಟಿ..ಇದು ಸಿಎಸ್ ಕೆ ತಂಡದ ಮಹಿಮೆ..! 4 csk ipl 2022 sports karnataka](http://sportskarnataka.com/wp-content/uploads/2022/02/csk.jpg)
ಅಚ್ಚರಿಯಂದ್ರೆ ಸಿಎಸ್ ಕೆ ತಂಡ ರಿಟೇನ್ ಮಾಡಿಕೊಂಡ ನಾಲ್ಕು ಮಂದಿ ಆಟಗಾರರಿಗೆ 42 ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನು 45.05 ಕೋಟಿ ಖರ್ಚು ಮಾಡಿ 21 ಮಂದಿ ಆಟಗಾರರನ್ನು ಖರೀದಿ ಮಾಡಿದೆ. ಅಲ್ಲದೆ ಜೇಬಿನಲ್ಲಿ ಇನ್ನೂ 2.95 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಆದ್ರೆ ತಂಡದ ಆಧಾರ ಸ್ತಂಭವಾಗಿದ್ದ ಸುರೇಶ್ ರೈನಾ ಅವರನ್ನು ಖರೀದಿ ಮಾಡದೇ ಅಚ್ಚರಿಯನ್ನು ಮೂಡಿಸಿದೆ. ಸುರೇಶ್ ರೈನಾ ಈ ಬಾರಿಯ ಐಪಿಎಲ್ ನ ಅನ್ ಸೋಲ್ಡ್ ಆಟಗಾರನಾಗಿದ್ದಾರೆ. Chennai Super Kings -full team squad in mega ipl auction 2022 –
ಸಿಎಸ್ ಕೆ ತಂಡ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂಪಾಯಿ, ಮಹೇಂದ್ರ ಸಿಂಗ್ ಧೋನಿಗೆ 12 ಕೋಟಿ ರೂಪಾಯಿ, ರುತುರಾಜ್ ಗಾಯಕ್ವಾಡ್ ಗೆ 8 ಕೋಟಿ ರೂಪಾಯಿ, ಮೋಯಿನ್ ಆಲಿಗೆ 6 ಕೋಟಿ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ 25 ಮಂದಿ ಆಟಗಾರರು
17 ಮಂದಿ ಭಾರತೀಯ ಆಟಗಾರರು, 8 ಮಂದಿ ವಿದೇಶಿ ಆಟಗಾರರು
ರಿಟೇನ್ ಮಾಡಿಕೊಂಡ ಆಟಗಾರರು -4
ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು 21
ಸಿಎಸ್ ಕೆ ಜೇಬಿನಲ್ಲಿದ್ದ ಒಟ್ಟು ಹಣ 90 ಕೋಟಿ ರೂ.
ರಿಟೇನ್ ಆಟಗಾರರಿಗೆ ಖರ್ಚು ಮಾಡಿದ ಹಣ – 42 ಕೋಟಿ ರೂ.
ಐಪಿಎಲ್ ಹರಾಜಿನಲ್ಲಿ ಖರ್ಚು ಮಾಡಿದ ಹಣ – 45.05 ಕೋಟಿ ರೂ.
ಸಿಎಸ್ ಕೆ ಒಟ್ಟು ಖರ್ಚು ಮಾಡಿದ ಹಣ – 87.05 ರೂ.
ಸಿಎಸ್ ಕೆ ಜೇಬಿನಲ್ಲಿ ಉಳಿಸಿಕೊಂಡ ಹಣ – 2.95 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಮಹೇಂದ್ರ ಸಿಂಗ್ ಧೋನಿ – 12 ಕೋಟಿ ರೂ.
ರವೀಂದ್ರ ಜಡೇಜಾ – 16 ಕೋಟಿ ರೂ.
ರುತುರಾಜ್ ಗಾಯಕ್ವಾಡ್ – 8 ಕೋಟಿ ರೂ.
ಮೋಯಿನ್ ಆಲಿ – 6 ಕೋಟಿ ರೂ.
ದೀಪಕ್ ಚಾಹರ್ – 14 ಕೋಟಿ ರೂ.
ರಾಬಿನ್ ಉತ್ತಪ್ಪ – 2 ಕೋಟಿ ರೂ.
ಅಂಬಟಿ ರಾಯುಡು – 6.75 ಕೋಟಿ ರೂ.
ಡೆವೋನ್ ಕಾನ್ವೆ – 1 ಕೋಟಿ ರೂ.
ಸುಭಾಂಶು ಸೆನಪಟಿ – 20 ಲಕ್ಷ ರೂ.
ಕೆ.ಎಮ್. ಆಶೀಫ್ -20 ಲಕ್ಷ ರೂ.
ತುಷಾರ್ ದೇಶಪಾಂಡೆ – 20 ಲಕ್ಷ ರೂ.
ಮಹೀಶ್ ತೀಕ್ಷ್ಣ – 70 ಲಕ್ಷ ರೂ.
ಸಿಮ್ರಾಜಿತ್ ಸಿಂಗ್ – 20 ಲಕ್ಷ ರೂ.
ಆಡಮ್ ಮಿಲ್ನೆ – 1.90 ಕೋಟಿ ರೂ.
ಮುಖೇಶ್ ಚೌಧರಿ – 20 ಲಕ್ಷ ರೂ.
ಡ್ವೇನ್ ಬ್ರೇವೋ – 4.40 ಕೋಟಿ ರೂ.
ಶಿವಂ ದುಬೆ – 4 ಕೋಟಿ ರೂ.
ರಾಜ್ಯವರ್ಧನ್ ಹಂಗೇರ್ಕರ್ – 1.50 ಕೋಟಿ ರೂ.
ಡ್ವೇಯ್ನ್ ಪ್ರಿಟೋರಿಸ್ – 50 ಲಕ್ಷ ರೂ.
ಮಿಟ್ಚೆಲ್ ಸ್ಯಾಂಟ್ನರ್ – 1.9 ಕೋಟಿ ರೂ.
ಪ್ರಶಾಂತ್ ಸೋಲಂಕಿ – 1.20 ಕೋಟಿ ರೂ.
ಎನ್. ಜಗದೀಶನ್ – 20 ಲಕ್ಷ ರೂ.
ಹರಿ ನಿಶಾಂತ್ – 20 ಲಕ್ಷ ರೂ.
ಕ್ರಿಸ್ ಜೋರ್ಡಾನ್ – 3.6 ಕೋಟಿ ರೂ.
ಕೆ. ಭಗತ್ ವರ್ಮಾ – 20 ಲಕ್ಷ ರೂ.