ಕ್ರಿಕೆಟ್ ಜಗತ್ತು ಎದುರು ನೋಡುತ್ತಿರುವ T20I ವಿಶ್ವಕಪ್(T20I World Cup) ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಿಶ್ವದ ಬಲಿಷ್ಠ ತಂಡಗಳ ಮುಖಾಮುಖಿಗೆ ವೇದಿಕೆಯಾಗಿರುವ ʼಫಾಸ್ಟ್ ಅಂಡ್ ಫ್ಯುರಿಯಸ್ʼ(Fast and Furious) ಕ್ರಿಕೆಟ್ ಸಮರಕ್ಕಾಗಿ ಎಲ್ಲಾ ತಂಡಗಳು ರೆಡಿಯಾಗಿದೆ.
ಆಸೀಸ್ ಅಂಗಳದಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 13ರವರೆಗೆ ನಡೆಯಲಿದೆ. ಚುಟುಕು ಕ್ರಿಕೆಟ್ ಮಹಾಯುದ್ಧಕ್ಕೆ ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನ ಸಹ ಬಿಡುಗಡೆ ಮಾಡಿದೆ. ಜಗತ್ತಿನ ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಹುಚ್ಚೆಬ್ಬಿಸಿರುವ T20I ಕ್ರಿಕೆಟ್ನಲ್ಲಿ ಹಲವು ಆಟಗಾರರು ತಮ್ಮ ಪವರ್ ಹಿಟ್ಟಿಂಗ್(Power Hitters) ಮೂಲಕ ಕಮಾಲ್ ಮಾಡಿದ್ದಾರೆ. ಇಂತಹ ಬಿಗ್ ಹಿಟ್ಟರ್ಗಳ ಲಿಸ್ಟ್ನಲ್ಲಿ 2022ರ T20I ವರ್ಲ್ಡ್ಕಪ್ನಲ್ಲಿ ಅಬ್ಬರಿಸೋಕ್ಕೆ ಸಜ್ಜಾಗಿರೋ ಪವರ್ ಹಿಟ್ಟರ್ಗಳ ಲಿಸ್ಟ್ ಇಲ್ಲಿದೆ.
2022ರ ಪವರ್ ಹಿಟ್ಟರ್ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ನಂ.1 ಸ್ಥಾನದಲ್ಲಿದ್ದಾರೆ. 2021ರಲ್ಲಿ ಆಸೀಸ್ ತಂಡಕ್ಕೆ T20I ಪ್ರಶಸ್ತಿ ತಂದುಕೊಟ್ಟಿದ್ದ ಮಿಚೆಲ್ ಮಾರ್ಷ್, ಸ್ಥಿರ ಪ್ರದರ್ಶನದಿಂದ 3ನೇ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇವರ ನಂತರದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದ್ದಾರೆ. ಯಾವುದೇ ಪಿಚ್, ಯಾವುದೇ ಬೌಲರ್ ಇದ್ದರೂ ಅತಿ ಸುಲಭವಾಗಿ ಬೌಂಡರಿ, ಸಿಕ್ಸರ್ ಬಾರಿಸೋ ಸಾಮರ್ಥ್ಯವಿರುವ ಹಾರ್ದಿಕ್, ಮಧ್ಯಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.
ಪವರ್ ಹಿಟ್ಟರ್ಗಳ ಸಾಲಿನಲ್ಲಿ 3ನೇ ಸ್ಥಾನದಲ್ಲಿರೋದು ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ಸ್ಟೋನ್, ಈಗಾಗಲೇ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹವಾ ಹುಟ್ಟಿಸಿರುವ ಲಿವಿಂಗ್ಸ್ಟೋನ್, 2022ರ T20I ವಿಶ್ವಕಪ್ನಲ್ಲಿ ಅಬ್ಬರಿಸೋಕ್ಕೆ ರೆಡಿಯಾಗಿದ್ದಾರೆ. ಇವರ ನಂತರದಲ್ಲಿರೋದು ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಟಿಮ್ ಡೇವಿಡ್, ಆಸೀಸ್ ಪರ ಹಲವು ಪಂದ್ಯಗಳಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದ ಗೆಲುವಿನ ಹೀರೋ ಆಗಿರುವ ಟಿಮ್ ಡೇವಿಡ್ T20I ವಿಶ್ವಕಪ್ನಲ್ಲಿ ತಮ್ಮ ಸಾಮರ್ಥ್ಯ ತೋರಿಸೋಕ್ಕೆ ಕಾಯುತ್ತಿದ್ದಾರೆ. ಟಿಮ್ ಡೇವಿಡ್ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದೇ ಆದಲ್ಲಿ, ಎದುರಾಳಿ ಬೌಲರ್ಗಳನ್ನ ಧೂಳಿಪಟ ಮಾಡೋದ್ರಲ್ಲಿ ಸಂದೇಹವೇ ಇಲ್ಲ.
ಬಿಗ್ ಹಿಟ್ಟರ್ಗಳ ಲಿಸ್ಟ್ನಲ್ಲಿ ಟಾಪ್ 5 ಸ್ಥಾನದಲ್ಲಿರೋದು ವೆಸ್ಟ್ ಇಂಡೀಸ್ನ ರೋವ್ಮನ್ ಪೊವೆಲ್, ವಿಶ್ವ ಕ್ರಿಕೆಟ್ನ ದೈತ್ಯ ಕ್ರಿಸ್ ಗೇಯ್ಲ್, ಕೈರನ್ ಪೊಲಾರ್ಡ್, ಡ್ವೇನ್ ಬ್ರಾವೋ ಅವರ ನಂತರದಲ್ಲಿ ವಿಂಡೀಸ್ ತಂಡದ ಪವರ್ ಹಿಟ್ಟರ್ ಎನಿಸಿರೋ ರೋವ್ಮನ್ ಪೊವೆಲ್, ವೇಗದ ಬೌಲರ್ಗಳನ್ನ ಮನಬಂದಂತೆ ದಂಡಿಸೋ ಸಾಮರ್ಥ್ಯ ಹೊಂದಿದ್ದು, ಕೆರಿಬಿಯನ್ ತಂಡಕ್ಕೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಬೆನ್ನೆಲುಬಾಗಿ ಕಾಣಿಸಿಕೊಂಡಿದ್ದಾರೆ.