BWF ವಿಶ್ವ ಚಾಂಪಿಯನ್ ಶಿಪ್: H.S ಪ್ರಣಯ್ ಗೆ ನಿರಾಸೆ
ಭಾರತದ ಸ್ಟಾರ್ ಆಟಗಾರ ಎಚ್.ಎಸ್ ಪ್ರಣಯ್ ಅವರು BWF ವಿಶ್ವ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಣಯ್ 19-21, 21-06, 21-18 ರಿಂದ ಚೀನಾದ ಝಾವೋ ಜುನ್ ಪೆಂಗ್ ಅವರ ವಿರುದ್ಧ ಸೋಲು ಕಂಡರು. ಒಂದು ಗಂಟೆ ನಾಲ್ಕು ನಿಮಿಷದಲ್ಲಿ ನಡೆದ ಪಂದ್ಯದಲ್ಲಿ ಪ್ರಣಯ್ ಆಘಾತ ಅನುಭವಿಸಿದರು. ಇದು ಉಭಯ ಸ್ಟಾರ್ ಆಟಗಾರರು ಎರಡನೇ ಬಾರಿ ಮುಖಾಮುಖಾಯಾಗಿದ್ದು ಎರಡೂ ಪಂದ್ಯಗಳಲ್ಲಿ ಚೀನಾ ಆಟಗಾರನ ಕೈ ಮೇಲಾಗಿದೆ.
ಮೊದಲ ಗೇಮ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪ್ರಣಯ್ ಗೆಲುವು ಸಾಧಿಸಿ ಭರವಸೆ ಮೂಡಿಸಿದ್ದರು. ಆದರೆ ಎರಡನೇ ಗೇಮ್ ನಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಅಲ್ಲದೆ ಹಿನ್ನಡೆ ಅನುಭವಿಸಿದರು. ಈ ಗೇಮ್ ನಲ್ಲಿ ಚೀನಾದ ಆಟಗಾರ ಸತತ ಏಳು ಅಂಕಗಳನ್ನು ಕಲೆ ಹಾಕಿ ಭಾರತದ ಆಟಗಾರನ ಮೇಲೆ ಒತ್ತಡ ಹೇರಿದರು.
ಮೂರನೇ ಗೇಮ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಉಭಯ ಆಟಗಾರರು ಜಿದ್ದಾಜಿದ್ದಿನ ಆಟ ಪ್ರದರ್ಶಿಸಿದರು. ಪರಿಣಾಮ ನಿರ್ಣಾಯಕ ಪಂದ್ಯ ಎಲ್ಲರ ಚಿತ್ತ ಕದ್ದಿತು. ಈ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಚೀನಾ ಆಟಗಾರ ಜಯ ಸಾಧಿಸಿದರು.
BWF, World Championship, H.S Pranay,