WBC 2022: ಒಂದೇ ಪಂದ್ಯ ಗೆದ್ದರೂ Saina Nehwal ಪ್ರೀ ಕ್ವಾರ್ಟರ್ ಫೈನಲ್ ಗೆ
ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಮಂಗಳವಾರದಂದು ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ತಮ್ಮ ಮೊದಲ ಸುತ್ತಿನಲ್ಲಿ ಎದುರಾಳಿಯನ್ನು ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ನಂತರ ಅವರು ಜಪಾನ್ನ ಆರನೇ ಶ್ರೇಯಾಂಕದ ನಜೋಮಿ ಒಕುಹರಾ ಅವರಿಂದ ವಾಕ್ಓವರ್ ಪಡೆದರು. ಹೀಗಾಗಿ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಿ-ಕ್ವಾರ್ಟರ್ಫೈನಲ್ ತಲುಪಿದರು.
2015ರಲ್ಲಿ ಜಕಾರ್ತದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಹಾಗೂ 2017ರಲ್ಲಿ ಗ್ಲಾಸ್ಗೋದಲ್ಲಿ ಕಂಚಿನ ಪದಕ ಗೆದ್ದಿದ್ದ 32ರ ಹರೆಯದ ಸೈನಾ ಮಂಗಳವಾರ 38 ನಿಮಿಷಗಳಲ್ಲಿ ಹಾಂಕಾಂಗ್ನ ಚೆಯುಂಗ್ ನ್ಗಾನ್ ಯಿ ಅವರನ್ನು 21-19, 21-9 ಸೆಟ್ಗಳಿಂದ ಸೋಲಿಸಿದರು.
ಮಹಿಳೆಯರ ಡಬಲ್ಸ್ ಜೋಡಿ ಟ್ರೆಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಮಲೇಷ್ಯಾದ ಲೊ ಯೆನ್ ಯುವಾನ್ ಮತ್ತು ವ್ಯಾಲೆರಿ ಸಿಯೊ ಅವರನ್ನು 37 ನಿಮಿಷಗಳಲ್ಲಿ 21-11, 21-13 ರಿಂದ ಸೋಲಿಸಿದರು.
ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಅವರು ಇಟಲಿಯ ಮಾರ್ಟಿನಾ ಕೊರ್ಸಿನಿ ಮತ್ತು ಜುಡಿತ್ ಮೇಯರ್ ಅವರನ್ನು 21-8, 21-14 ರಿಂದ ಸೋಲಿಸುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿದರು. ಆದಾಗ್ಯೂ, ಮಿಶ್ರ ಡಬಲ್ಸ್ನಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಜೋಡಿ 14-21, 17-21 ರಿಂದ 14ನೇ ಶ್ರೇಯಾಂಕದ ಥಾಯ್ಲೆಂಡ್ನ ಸುಪಕ್ ಜೊಮ್ಕೊ ಮತ್ತು ಸುಪಿಸಾರಾ ಪಾವ್ಸಂಪ್ರನ್ ವಿರುದ್ಧ ಸೋತರು.
ಪುರುಷರ ಡಬಲ್ಸ್ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಜೋಡಿ 14-21, 18-21ರಲ್ಲಿ ಫ್ರೆಂಚ್ ಜೋಡಿ ಫ್ಯಾಬಿಯನ್ ಡೆಲೆರೊ ಮತ್ತು ವಿಲಿಯಂ ವಿಲೇಜರ್ ಎದುರು ಶರಣಾಯಿತು.
ಬುಧವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಅವರು ಚೀನಾದ ಷಟ್ಲರ್ ಜೆಪಿ ಝಾವೊ ಅವರನ್ನು ಎದುರಿಸಲಿದ್ದಾರೆ. ಸ್ಪ್ಯಾನಿಷ್ ಬ್ಯಾಡ್ಮಿಂಟನ್ ಆಟಗಾರ ಎಲ್ ಪೆನಾಲ್ವರ್ ವಿರುದ್ಧ ಲಕ್ಷ್ಯ ಸೇನ್ ಕಣಕ್ಕಿಳಿಯಲಿದ್ದಾರೆ.
BWF Badminton, Saina Nehwal, Pre-Quarterfinals