BCCI Vs PCB – ರಮೀಝ್ ರಾಜಾ ಕನಸಿನ ಯೋಜನೆಗಳಿಗೆ ಬಿಸಿಸಿಐ ಅಡ್ಡಿಯಾಗುತ್ತಿದೆಯಾ ?

ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಮೀಝ್ ರಾಜಾ ಅವರು ಪಾಕ್ ಕ್ರಿಕೆಟ್ ನ ಅಭಿವೃದ್ದಿಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಪಿಸಿಬಿ ಅಧ್ಯಕ್ಷರಾದ ನಂತರ ಪಾಕ್ ಕ್ರಿಕೆಟ್ ನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಾಕ್ ಕ್ರಿಕೆಟ್ ನ ಹಳೆಯ ವರ್ಚಸ್ಸನ್ನು ಪಡೆಯಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಆದ್ರೆ ಐಸಿಸಿ ಮಟ್ಟದಲ್ಲಿ ರಮೀಝ್ ರಾಜಾ ಅವರ ಪ್ರಯತ್ನಕ್ಕೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಈ ಹಿಂದೆ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ರಾಷ್ಟ್ರಗಳ ನಡುವಿನ ಟಿ-20 ಸರಣಿಯನ್ನು ನಡೆಸುವ ಪ್ರಸ್ತಾಪಣೆಯನ್ನು ಮಾಡಿದ್ದರು. ಆದ್ರೆ ಈ ಪ್ರಸ್ತಾಪಕ್ಕೆ ಬಿಸಿಸಿಐ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ.
ಇದೀಗ ರಮೀಝ್ ರಾಜಾ ಅವರು ಐಸಿಸಿ ಮುಂದೆ ಮತ್ತೊಂದು ಪ್ರಸ್ತಾಪವನ್ನು ಸಲ್ಲಿಸಲಿದ್ದಾರೆ. ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಸರಣಿಯನ್ನು ನಡೆಸಲು ಐಸಿಸಿ ಮುಂದೆ ಮನವಿಯನ್ನಿಟ್ಟಿದೆ. 2023ರಿಂದ 2027ರ ಕ್ಯಾಲೆಂಡರ್ ನಲ್ಲಿ ಐಸಿಸಿ ಮೂರು ರಾಷ್ಟ್ರಗಳ ನಡುವಿನ ಟಿ-20 ಸರಣಿಗೆ ಅವಕಾಶವನ್ನು ನೀಡಬೇಕು ಎಂದು ಪಿಸಿಬಿ ಪ್ರಸ್ತಾಪ ಸಲ್ಲಿಸಲಿದೆ. ಮುಂಬರುವ ಕಾಮನ್ ವೆಲ್ತ್ ಕ್ರೀಡಾಕೂಟದ ವೇಳೆ ಬರ್ಮಿಂಗ್ ಹ್ಯಾಮ್ ನಲ್ಲಿ ಐಸಿಸಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಮೀಝ್ ರಾಜಾ ಅವರು ಪ್ರಸ್ತಾವಣೆಯನ್ನು ಮಾಡಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. BCCI Vs PCB -PCB planning annual three-nation T20 series excluding India

ರಮೀಝ್ ರಾಜಾ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಪಿಸಿಬಿಯ ಪ್ರಸ್ತಾಪಕ್ಕೆ ಬಿಸಿಸಿಐ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಹೀಗಾಗಿ ರಮೀಝ್ ರಾಜಾ ಅವರು ತಮ್ಮ ಕನಸಿನ ಯೋಜನೆಯಿಂದ ಭಾರತವನ್ನು ಕೈಬಿಟ್ಟಿದ್ದಾರೆ. ಆದ್ರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಕೈ ಜೋಡಿಸುವ ವಿಶ್ವಾಸವನ್ನು ರಮೀಝ್ ರಾಜಾ ಅವರು ಹೊಂದಿದ್ದಾರೆ. ಅದು ಅಲ್ಲದೆ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಗಳಿಗೆ ಉತ್ತಮ ಭವಿಷ್ಯ ಇದೆ ಎಂಬುದರ ಮೇಲೆ ರಮೀಝ್ ರಾಜಾ ಅವರಿಗೆ ನಂಬಿಕೆ ಇಲ್ಲ. ಹೀಗಾಗಿ ಮೂರು ಅಥವಾ ನಾಲ್ಕು ರಾಷ್ಟ್ರಗಳ ನಡುವೆ ವಾರ್ಷಿಕವಾಗಿ ಸರಣಿಗಳನ್ನು ನಡೆಸಿದ್ರೆ ಕ್ರಿಕೆಟ್ ಆಟ ಇನ್ನಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂಬ ನಂಬಿಕೆ ಅವರಲ್ಲಿದೆ.
ಒಟ್ಟಿನಲ್ಲಿ ರಮೀಝ್ ರಾಜಾ ಅವರು ಪಾಕ್ ಕ್ರಿಕೆಟ್ ಬೆಳವಣಿಗೆಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದ್ರೆ ಅವು ಯಾವುದು ಕೂಡ ಅಂದುಕೊಂಡಂತೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಿಸಿಸಿಐನ ಪ್ರಭಾವ ಕೂಡ ಜಾಸ್ತಿ ಇದೆ. ಹೀಗಾಗಿ ರಮೀಝ್ ರಾಜಾ ಅವರ ಕನಸಿನ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ.
ಈ ನಡುವೆ, ರಮೀಝ್ ರಾಜಾ ಅವರು ಐಪಿಎಲ್ ನಲ್ಲಿ ಪಾಕ್ ಕ್ರಿಕೆಟ್ ಲೀಗ್ ಅನ್ನು ಮತ್ತಷ್ಟು ಜನಪ್ರಿಯತೆಗೊಳಿಸಲು ಕೂಡ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ಆದ್ರೆ ಅದ್ಯಾವುದು ಕೂಡ ವರ್ಕ್ ಔಟ್ ಆಗುತ್ತಿಲ್ಲ.