Malaysia Open-2022- – ಸೈನಾಗೆ ಸೋಲು .. ಸಿಂಧು, ಕಶ್ಯಪ್ ಮುನ್ನಡೆ

ಮಲೇಶ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು ಮತ್ತು ಪಿ. ಕಶ್ಯಪ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಪಿ. ವಿ. ಸಿಂಧು 21-13, 21-17ರಿಂದ ಥಾಯ್ಲೆಂಡ್ ಚೊಚುವೊಂಗ್ ಅವರನ್ನು ಮಣಿಸಿದ್ರು.
ಅದ್ಭುತ ಆಟವನ್ನಾಡಿದ ಪಿ.ವಿ. ಸಿಂಧು ಅವರು ಈ ಟೂರ್ನಿಯಲ್ಲಿ ಏಳನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು ಥಾಲೆಂಡ್ ನ ಫಿಟಾಯಾಪೊರ್ನ್ ಚೈವಾನ್ ಅವರನ್ನು ಎದುರಿಸಲಿದ್ದಾರೆ. 21ರ ಹರೆಯದ ಚೈವಾನ್ ಅವರು ವಿಶ್ವ ಜ್ಯೂನಿಯರ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನ ಪಡೆದುಕೊಂಡಿದ್ದರು.
ಇನ್ನು ಮಹಿಳೆಯರ ಮತ್ತೊಂದು ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ಅವರು 11-21, 17-21 ನೇರ ಸೆಟ್ ಗಳಿಂದ ಕೇವಲ 37 ನಿಮಿಷಗಳ ಹೋರಾಟದಲ್ಲಿ ಅಮೆರಿಕಾದ ಐರಿಸ್ ವಾಂಗ್ ಅವರಿಗೆ ತಲೆಬಾಗಿದ್ರು. Malaysia Open-2022- – Sindhu, Kashyap win; Saina loses
ಪುರುಷರ ಸಿಂಗಲ್ಸ್ ನಲ್ಲಿ ಪಿ. ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲಿ 21-12, 21-17ರಿಂದ ಕೊರಿಯಾದ ಹೆಯೋ ಕ್ವಾಂಗ್ ಹೀ ಅವರನ್ನು ಪರಾಭವಗೊಳಿಸಿದ್ರು. ಎರಡನೇ ಸುತ್ತಿನಲ್ಲಿ ಕಶ್ಯಪ್ ಮತ್ತು ಥಾಯ್ಲೆಂಡ್ ನ ಕುಂಲಾವುಟ್ ವಿಟಿದ್ಸರ್ನ್ ಕಾದಾಟ ನಡೆಯಲಿದೆ. ಟೂರ್ನಿಯಲ್ಲಿ ಕಶ್ಯಪ್ 37ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ನಿರಾಸೆ ಅನುಭವಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಮತ್ತು ಸುಮೀತ್ 15-21, 21-19, 17-21ರಿಂದ ನೆದರ್ಲೆಂಡ್ ನ ರಾಬಿನ್ ಟಾಬೆಲಿಂಗ್ ಮತ್ತು ಸೆಲೆನಾ ಪೈಕ್ ವಿರುದ್ದ ಪರಾಭವಗೊಂಡ್ರು.