ಈ ಬಾರಿಯ IPL Players Mega Auction ಅತ್ಯಂತ ಕುತೂಹಲ ಕೆರಳಿಸಿತ್ತು. ಹರಾಜಿಗೆ ಹೆಸರು ನೋಂದಾಯಿಸಿದ ಆಟಗಾರರ ಸಂಖ್ಯೆ ಹುಬ್ಬೇರುವಂತೆ ಮಾಡಿತ್ತು. ಆದರೆ ಈಗ ಬಿಸಿಸಿಐ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಶಾರ್ಟ್ ಲಿಸ್ಟ್ ಮಾಡಿದೆ. 1214 ಆಟಗಾರರ ಪೈಕಿ ಕೇವಲ 590 ಆಟಗಾರರು ಮಾತ್ರ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಶಾರ್ಟ್ ಲಿಸ್ಟ್ ನಲ್ಲಿರುವ 590 ಆಟಗಾರರ ಪೈಕಿ 370 ಆಟಗಾರರು ಭಾರತೀಯರಾಗಿದ್ದಾರೆ. 220 ವಿದೇಶಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ನ್ಯೂಜಿಲೆಂಡ್ನ 24 ಆಟಗಾರರು ಸ್ಥಾನ ಪಡೆದಿದ್ದಾರೆ. ಆರ್ಸಿಬಿ ತಂಡದಲ್ಲಿದ್ದ ಕಿವೀಸ್ ವೇಗಿ ಕೈಲ್ ಜೇಮಿಸನ್ ಹರಾಜಿನಿಂದ ಹಿಂದೆ ಸರಿದಿರುವುದು ಅಚ್ಚರಿಗೆ ಕಾರಣವಾಗಿದೆ. ಜೇಮಿಸನ್ ಕಳೆದ ಬಾರಿ ಆರ್ ಸಿಬಿಯಿಂದ 15 ಕೋಟಿ ರೂಪಾಯಿ ಪಡೆದುಕೊಂಡಿದ್ದರು.
ಟಿ20 ಕ್ರಿಕೆಟ್ನ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಕೂಡ ಹರಾಜಿನಲ್ಲಿಲ್ಲ. ಗೇಲ್ ಕಳೆದ 14 ಸೀಸನ್ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು . ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನತ್ತ ಗಮನಕೊಡುವ ದೃಷ್ಟಿಯಿಂದ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಸ್ಯಾಮ್ ಕರ್ರನ್, ಮಿಚೆಲ್ ಸ್ಟಾರ್ಕ್ ಕ್ರಿಸ್ ವೋಕ್ಸ್, ಕೂಡ ವಿವಿಧ ಕಾರಣಗಳಿಂದಾಗಿ ಆಟಗಾರರ ಹರಾಜಿನಿಂದ ದೂರವಿದ್ದಾರೆ.