ಈ ವರ್ಷ ಬರ್ಮಿಂಗ್ಹ್ಯಾಂನಲ್ಲಿ(Barmingham) ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ (CWG 2022)ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿದೆ. 8 ತಂಡಗಳು ಇಲ್ಲಿ ಚಿನ್ನದ ಪದಕಕ್ಕಾಗಿ ಹೋರಾಟ ಮಾಡಲಿವೆ. ಟಿ20 ಫಾರ್ಮೆಟ್ನಲ್ಲಿ ನಡೆಯಲಿರುವ ಕ್ರಿಕೆಟ್ ಫೈಟ್ ಶೆಡ್ಯೂಲ್ (Fixture) ಫೈನಲ್ ಆಗಿದೆ.
ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಬಾರ್ಬಡೋಸ್, ಈ ಗುಂಪಿನಲ್ಲಿರುವ ಇತರೆ ತಂಡಗಳು. ಬಿ ಗುಂಪಿನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸ್ಥಾನ ಪಡೆದುಕೊಂಡಿವೆ.
ಜುಲೈ 29 ರಂದು ಭಾರತ ತನ್ನ ಅಭಿಯಾನವನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ. 31 ರಂದು ಭಾರತ ಮತ್ತು ಪಾಕ್ ಪಂದ್ಯ ನಡೆಯಲಿದೆ. ಆಗಸ್ಟ್ 4 ರಂದು ಲೀಗ್ ಪಂದ್ಯಗಳು ಕೊನೆಯಾಗಲಿವೆ. ಆಗಸ್ಟ್ 6 ರಂದು ಸೆಮಿಫೈನಲ್ಗಳು ನಡೆದರೆ, ಆಗಸ್ಟ್ 7 ರಂದು ಫೈನಲ್ ನಡೆಯಲಿದೆ.