ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಮಹತ್ವದ ವಿಚಾರಗಳ ಕುರಿತು ಗಮನ ನೀಡುತ್ತೇನೆ ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಸೌರವ್ ಗಂಗೂಲಿ ಹೇಳಿದ್ದಾರೆ.
ಮುಂಬರುವ ಚುನಾವಣೆ ಕುರಿತು ಕೊನೆಗೂ ಮೌನ ಮುರಿದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್, ಯಾವಗಲೂ ಆಡಲು ಸಾಧ್ಯವಿಲ್ಲ.
ಅಧಿಕಾರದಲ್ಲಿರಲು ಸಾಧ್ಯವಿಲ್ಲ. ಆದರೆ ನಾಣ್ಯದ ಎರಡೂ ಮುಖ ನೋಡಿದಕ್ಕೆ ಖುಷಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆ ಕುರಿತು ಹೆಮ್ಮೆ ಇದೆ. ಮೂರು ವರ್ಷಗಳ ಆಡಳಿತದಲ್ಲಿ ಒಳ್ಳೆಯ ಸಂಗತಿಗಳು ನಡೆದಿವೆ.
ಕೊರೋನಾ ಸಂದರ್ಭದಲ್ಲಿ ಯಶಸ್ವಿಯಾಗಿ ಐಪಿಎಲ್ ನಡೆಸಿದ್ದೇವೆ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಬಿಸಿಸಿಐ ಅಧ್ಯಕ್ಷ ನಾಗಿದ್ದೆ.
ಓರ್ವ ಕ್ರಿಕೆಟಿಗನಾಗಿ ಹಲವಾರು ಸವಾಲಗಳನ್ನು ಎದುರಿಸಿದ್ದೆ ಎಂದು ನೆನೆದಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿಗೆ ಹೊಸ ಬಾಸ್ ಆಯ್ಕೆಯಾದ ಬೆನ್ನಲ್ಲೆ ಬಿಸಿಸಿಐ ಸೌರವ್ ಗಂಗೂಲಿ ಅವರನ್ನು ಮೂಲೆಗುಂಪು ಮಾಡಿದೆ.ಮೂಲಗಳ ಪ್ರಕಾರ ಗಂಗೂಲಿ ಹಾಗೂ ಬಿಸಿಸಿಐ ನಡುವೆ ಮನಸ್ತಾಪವಿದೆ ಎಂದು ತಿಳಿದು ಬಂದಿದೆ.
ಮುಖ್ಯವಾಗಿ ಆಡಳಿತ ವಿಚಾರದಲ್ಲಿ ಬಿಸಿಸಿಐಗೆ ಪ್ರಾಯೋಜತ್ವ ನೀಡುವ ಸಂಸ್ಥೆಗಳನ್ನು ಬಿಟ್ಟು ಬೇರೆ ಸಂಸ್ಥೆಗಳ ಜೊತೆ ಕೈಜೋಡಿಸಿದ್ದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಜೊತೆಗೆ 3 ವರ್ಷಗಳ ಗಂಗೂಲಿ ಅವರ ಆಡಳಿತ ನಡೆಸಿದ ಬಗ್ಗೆ ಬಿಸಿಸಿಐನೊಳಗೆ ಅಸಮಾಧಾನವಿದೆ ಎಂದು ತಿಳಿದು ಬಂದಿದೆ.