ಟೌನ್ಸ್‌ವಿಲ್ಲೆಯಲ್ಲಿ ಆಸ್ಟ್ರೇಲಿಯಾ ಜಿಂಬಾಬ್ವೆ (Aus VS Zim) ತಂಡವನ್ನು ಹೇಳ ಹೆಸರಿಲ್ಲದೆ ಸೋಲಿಸಿದೆ. ಬೌಲಿಂಗ್‌ನಲ್ಲಿ ಜಿಂಬಾಬ್ವೆಯನ್ನು (Zim) ಕಟ್ಟಿ ಹಾಕಿದ ಅತಿಥೇಯ ಆಸ್ಟ್ರೇಲಿಯಾ (Aus) ಪ್ರವಾಸಿ ತಂಡ ಏನಾಗುತ್ತಿದೆ ಅನ್ನುವುದನ್ನು ಅರಿತುಕೊಳ್ಳುವ ಮುನ್ನವೆ ಪಂದ್ಯ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ (Zimbabwe) ಆಸ್ಟ್ರೇಲಿಯಾ (Australia) ಬಿಗು ದಾಳಿ ಮುಂದೆ ರನ್‌ಗಾಗಿ ಪರದಾಡಿತು. ಮಿಚೆಲ್ ಸ್ಟಾರ್ಕ್ ಜಿಂಬಾಬ್ವೆ ಮೊತ್ತ 14 ರನ್‌ಗಳಾಗುವಷ್ಟರಲ್ಲಿ ಇನ್ನಸಂಟ್ ಕಿಯ, ಮುರುಮಾನಿ ಮತ್ತು ಮದವೆರೆ ಆಟಕ್ಕೆ ಮಂಗಳ ಹಾಡಿದ್ದರು. ಸೀನ್ ವಿಲಿಯಮ್ಸ್ ಮತ್ತು ಸಿಕಂದರ್ ರಾಜಾ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು.
ಆದರೆ 29 ರನ್‌ಗಳಿಸಿದ್ದ ವಿಲಿಯಮ್ಸ್ ಆಡಂ ಜಂಪಾ ಎಸೆತದಲ್ಲಿ ಔಟಾದರೆ, ರಾಜಾ 17 ರನ್‌ಗಳಿಸಿದ್ದಾಗ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ರೆಗಿಸ್ ಚಕಬ್ವಾ ಆಸ್ಟನ್ ಅಗರ್‌ಗೆ ವಿಕೆಟ್ ಒಪ್ಪಿಸಿದರು.
ಕೆಮರೂನ್ ಗ್ರೀನ್ ರ್ಯಾನ್ ಬರ್ಲ್ ಮತ್ತು ಮುನ್ಯೋಗ ವಿಕೆಟ್ ಪಡೆದರು. ಜಂಪಾ ಲ್ಯೂಕ್ ಜೊಂಗ್ವೆ ಮತ್ತು ಬ್ರಾಡ್ ಇವಾನ್ಸ್ ವಿಕೆಟ್ ಕಿತ್ತು ಜಿಂಬಾಬ್ವೆ ಆಟಕ್ಕೆ ಅಂತಿಮ ಮೊಳೆ ಹೊಡೆದರು. ಪ್ರವಾಸಿ ತಂಡ ಕೇವಲ 27.5 ಓವರುಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು. ಸ್ಟಾರ್ಕ್ ಮತ್ತು ಜಂಪಾ ತಲಾ 3 ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 14.4 ಓವರುಗಳಲ್ಲಿ 2 ವಿಕೆಟ್ ಕಳೆದುಕೊಂಡು ದಿಗ್ವಿಜಯ ಸಾಧಿಸಿತು. ಡೇವಿಡ್ ವಾರ್ನರ್ 13 ಮತ್ತು ಆರೋನ್ ಫಿಂಚ್ 1 ರನ್‌ಗಳಿಸಿ ಔಟಾದರು. ಸ್ಟೀವನ್ ಸ್ಮಿತ್ ಅಜೇಯ 47 ಮತ್ತು ಅಲೆಕ್ಸ್ ಕ್ಯಾರಿ ಅಜೇಯ 26 ರನ್‌ಗಳಿಸಿದ್ದರು. ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.