US Open – 2022- ಮುನ್ನಡೆ ಸಾಧಿಸಿದ ರಫೆಲ್ ನಡಾಲ್

ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ರಫೆಲ್ ನಡಾಲ್ ಅವರು ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಶ್ರೇಯಾಂಕಿತ ರಫೆಲ್ ನಡಾಲ್ ಅವರು ಮೊದಲ ಸೆಟ್ ಅನ್ನು ಸೋಲು ಅನುಭವಿಸಿದ್ದರು. ಆದ್ರೆ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ ರಫೆಲ್ ನಡಾಲ್ ಅವರು ಅಂತಿಮವಾಗಿ 4-6, 6-2, 6-3, 6-3ರಿಂದ ಆಸ್ಟ್ರೇಲಿಯಾದ ರಿಂಕಿ ಹಿಜಿಕ್ಯಾಟ್ ಅವರನ್ನು ಮಣಿಸಿದ್ರು.
ಈಗಾಗಲೇ ದಾಖಲೆಯ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ರಫೆಲ್ ನಡಾಲ್ ಗೆ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವ ಹೆಚ್ಚಿನ ಅವಕಾಶಗಳಿವೆ. ಅಲ್ಲದೆ ಜಿದ್ದಾಜಿದ್ದಿನ ಪೈಪೋಟಿ ಒಡ್ಡಲು ರೋಜರ್ ಫೆಡರರ್ ಮತ್ತು ನೊವಾಕ್ ಜಾಕೊವಿಕ್ ಕೂಡ ಈ ಬಾರಿಯ ಯುಎಸ್ ಓಪನ್ ಟೂರ್ನಿಯಲ್ಲಿ ಆಡುತ್ತಿಲ್ಲ.
ಇನ್ನೊಂದು ಸಿಂಗಲ್ಸ್ ನಲ್ಲಿ ಮುರನೇ ಶ್ರೇಯಾಂಕಿತ ಸ್ಪೇನ್ ನ ಕಾರ್ಲೊಸ್ ಆಕ್ಲಾರಾಝ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಕಾರ್ಲೊಸ್ ಆಕ್ಲಾರಾಝ್ 7-5, 7-5, 2-0ಯಿಂದ ಅರ್ಜೆಂಟಿನಾದ ಸೆಬಾಸ್ಟಿಯನ್ ಬಾಝ್ ಅವರನ್ನು ಮಣಿಸಿದ್ರು.
ಹಾಗೇ ಮತ್ತೊಂದು ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ನ ಕಾಮರೊನ್ ನೊರಿಯ್ 6-0, 7-6, 6-0ಯಿಂದ ಫ್ರಾನ್ಸ್ ಬೆನೊಟ್ ಪೈರ್ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.