ಜಿಂಬಾಬ್ವೆ (Zimbabwe) ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯ (ODI) ಕೊನೆಯ ಪಂದ್ಯದಲ್ಲಿ ಹೋರಾಟ ನೀಡಿ ಸೋಲು ಕಂಡಿತ್ತು. ಈಗ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಹೋರಾಟ ಮಾಡಿ ಗಮನ ಸೆಳೆದಿದೆ. ಆಸ್ಟ್ರೇಲಿಯಾ ನೆಲದಲ್ಲೇ ಜಿಂಬಾಬ್ವೆ(Aus VS Zim) ಆಟ ಗಮನ ಸೆಳೆದಿತ್ತು. ಆದರೆ ತಪ್ಪುಗಳು ಜಿಂಬಾಬ್ವೆಗೆ 5 ವಿಕೆಟ್‌ಗಳ ಸೋಲಿಗೆ ಶರಣಾಗುವಂತೆ ಮಾಡಿತು.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ (Zim) 47.3 ಓವರುಗಳಲ್ಲಿ 200 ರನ್‌ಗಳನ್ನು ಮಾಡಿತ್ತು. ಇನ್ನಸಂಟ್ ಕಿಯಾ (17) ರನ್‌ಗಳಿಸಿ ಔಟಾದರು, ಮುರುಮಾನಿ (45) ವೆಸ್ಲಿ ಮದವಿರೆ (27) ರನ್‌ಗಳಿಸಿ ಹೋರಾಟ ಮಾಡಿದರು. ರೇಗಿಸ್ ಚಕಬ್ವಾ 31 ರನ್‌ಗಳಿಸಿ ಇದಕ್ಕೆ ಸಾಥ್ ನೀಡಿದರು. ಆದರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಷ್ಟೇ ಅಲ್ಲ ಎರಡಂಕಿ ಗಡಿ ಕೂಡ ದಾಟಲಿಲ್ಲ. ಇದು ಜಿಂಬಾಬ್ವೆಗೆ ಹಿನ್ನಡೆ ಆಗುವಂತೆ ಮಾಡಿತು.
ಆಸೀಸ್ (Aus)ದಾಳಿಯಲ್ಲಿ ಮಿಂಚಿದ್ದು ಆಲ್‌ರೌಂಡರ್ ಕೆಮರೂನ್ ಗ್ರೀನ್. ಗ್ರೀನ್ 33 ರನ್‌ಗಳಿಗೆ 5 ವಿಕೆಟ್ ಪಡೆದು ಸೂಪರ್ ಬೌಲಿಂಗ್ ಪ್ರದರ್ಶನ ನೀಡಿದರು. ಆಡಂ ಜಂಪಾ 3 ವಿಕೆಟ್ ಪಡೆದುಕೊಂಡರೆ ಇನ್ನೆರಡು ವಿಕೆಟ್ ಮಿಚೆಲ್ ಸ್ಟಾರ್ಕ್ ಮತ್ತು ಮಿಚೆಲ್ ಮಾರ್ಷ್ ಪಾಲಾಯಿತು.
ಚೇಸಿಂಗ್‌ಗೆ ಹೊರಟ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (15) ವಿಕೆಟ್ ಬೇಗನೆ ಕಳೆದುಕೊಂಡಿತು. ಡೇವಿಡ್ ವಾರ್ನರ್ 57 ರನ್‌ಗಳಿಸಿ ಮಿಂಚಿದರು. ಅಲೆಕ್ಸ್ ಕ್ಯಾರಿ (10), ಮಾರ್ಕಸ್ ಸ್ಟೋಯ್ನಿಸ್ (19) ಮತ್ತು ಮಿಚೆಲ್ ಮಾರ್ಷ್ (2) ಬೇಗನೆ ಔಟಾದರು.
ಆದರೆ ಮಾಜಿ ನಾಯಕ ಸ್ಟೀವನ್ ಸ್ಮಿತ್ ಆಟವನ್ನು ಯಾರೂ ಕಟ್ಟಿಹಾಕಲಿಲ್ಲ. ಸ್ಮಿತ್ ಅಜೇಯ 48 ರನ್‌ಗಳಿಸಿದರೆ, ಗ್ಲೆನ್ ಮ್ಯಾಕ್ಸ್‌ವೆಲ್ 9 ಎಸೆತಗಳಲ್ಲಿ 3 ಫೋರ್ ಮತ್ತು 3 ಸಿಕ್ಸರ್ ಸಿಡಿಸಿ ಅಜೇಯ 32 ರನ್‌ಗಳ ಮೂಲಕ ತಂಡವನ್ನು 33.3 ಓವರುಗಳಲ್ಲಿ ಗೆಲ್ಲುವಂತೆ ಮಾಡಿದರು.