ಭಾರತೀಯ ಕುಸ್ತಿ ಫೆಡರೇಶನ್ನ ತಾತ್ಕಲಿಕಾಆಡಳಿತ ಸಮಿತಿ ತಾರಾ ಕುಸ್ತಿಪಟುಗಳಾದ ಭಜರಂಗ್ ಪುನಿಯಾ ಹಾಗೂ ವಿನೇಶ್ ಪೋಗಟ್ ಮುಂಬರುವ ಏಷ್ಯನ್ ಗೇಮ್ಗೆ ನೇರ ಅರ್ಹತೆ ನೀಡಿದೆ.
ಪುರುಷರ 65 ಕೆ.ಜಿ ವಿಭಾಗದಲ್ಲಿ ಭಜರಂಗ್ 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ.
ಇನ್ನುಳಿದ ವಿಭಾಗಗಳಿಗೆ ಜು.21, ಜು.22 ರಂದು ಟ್ರಯಲ್ಸ್ ತಾತ್ಕಲಿಕ ನಡೆಯಲಿದೆ. ಡಬ್ಲ್ಯುಎಫ್ ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಈ ಇಬ್ಬರು ಕುಸ್ತಿಪಟುಗಳು ಕಳೆದ
7 ತಿಂಗಳುಗಳಿಂದ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಡಿರಲಿಲ್ಲ.
ಇದೇ ವೇಳೆ 65ಕೆ.ಜಿವಿಭಾಗದಲ್ಲಿ ಸಜೀತ್ ಹಾಗೂ 53ಕೆ.ಜಿ ವಿಭಾಗದಲ್ಲಿ
ಅಂತಿಮ್ ಪಂಘಲ್ ಉತ್ತಮ ಪ್ರದರ್ಶನ ನೀಡಿದ್ದರೂ ಆಯ್ಕೆಗೆ ಪರಿಗಣಿಸದ ಬಗ್ಗೆ ಭಜರಂಗ್ –ವಿನೇಶ್ ಪೋಗಟ್ ಗೆ ಅವಕಾಶ ನೀಡಿರುವುದಕ್ಕೆ ಭಾರೀ ಟೀಕೆಗಳು ಕೇಳಿ ಬಂದಿವೆ.
ತಾತ್ಕಲಿಕ ಸಮಿತಿ ಕುಸ್ತಿ ಪಟುಗಳ ಆಯ್ಕೆ ವಿಚಾರದಲ್ಲಿ ತೆಗೆದುಕೊಳ್ಳುವನಿರ್ಧಾರಗಳ ಬಗ್ಗೆ ಕುಸ್ತಿಪಟುಗಳು ಹಾಗೂ ಕೋಚ್ ಗಳು ಗರಂ ಆಗಿದ್ದು ಕೋರ್ಟ್ಗೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.