ಭಾರತದ ತಾರಾ ಷಟ್ಲರ್ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಬ್ಯಾಡ್ಮಿಂಟನ್ನಲ್ಲಿ ಅತಿ ವೇಗದ ಸ್ಮ್ಯಾಷ್ ಸಿಡಿಸುವ ಮೂಲಕ ನೂತನ ಗಿನ್ನಸ್ ದಾಖಲೆ ನಿರ್ಮಿಸಿದ್ದಾರೆ.
ಮಂಗಳವಾರ ಆರಂಭವಾದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ನ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ ನ ಸುಪಕ್ ಜೊಮ್ಕೆಹ್ ಮತ್ತು ಕಿಟ್ಟಿನುಪಾಂಕ್ ಕೆಟ್ರನ್ ವಿರುದ್ಧ ಸಾತ್ವಿಕ್ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಜೋಡಿ 21-16, 21-14 ನೇರ ಗೇಮ್ ಗಳಿಂದ ಗೆದ್ದು ಪ್ರೀ ಕ್ವಾರ್ಟರ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಸಾತ್ವಿಕ್ ಹೊಡೆದ ಸ್ಮ್ಯಾಶ್ 565 ಕಿ.ಲೋ.ವೇಗದಲ್ಲಿ ಚಲಿಸಿದೆ.
2013ರಲ್ಲಿ ಮಲೇಷ್ಯಾದ ಟಾನ್ ಬೂನ್ ಹ್ಯೋಂಗ್ ನಿರ್ಮಿಸಿದ್ದ ದಾಖಲೆ ಗಂಟೆಗೆ 493 ಕಿಲೋ ಮೀಟರ್ ವೇಗದ ಸ್ಮ್ಯಾಶ್ ದಾಖಲೆಯನ್ನು ಸಾತ್ವಿಕ್ ಅಳಿಸಿ ಹಾಕಿದ್ದಾರೆ.