ಬಾಕ್ಸರ್‍ಗಳಾದ ಲವ್ಲಿನಾ ಬೊರ್ಗೊಹೈನ್ ಹಾಗೂ ಪ್ರವೀಣ್ ಹೂಡಾ ಪ್ರತಿಷ್ಠಿತ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದು ಮಿಂಚಿದ್ದಾರೆ.
ಜೋರ್ಡನ್ನ ಅಮ್ಮಾನ್‍ನಲ್ಲಿ ನಡೆದ ಫೈನಲ್‍ನಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ (75 ಕೆಜಿ) ಉಜ್ಬೇಕಿಸ್ತಾನದ ರುಜಮೆಟೊವಾ ಸೊಕಿಬಾ ವಿರುದ್ಧ 5-0 ತೀರ್ಪುಗಾರರ ಒಮ್ಮತದ ನಿರ್ಧಾರದಿಂದ ಗೆದ್ದರು. ಇದರೊಂದಿಗೆ ಚೊಚ್ಚಲ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಲವ್ಲಿನಾ ಚಿನ್ನ ಗೆದ್ದ ಸಾಧನೆ ಮಾಡಿದರು.
ಪುರುಷರ 63 ಕೆ.ಜಿ. ವಿಭಾಗದಲ್ಲಿ ಪ್ರವೀಣ್ ಹೂಡಾ ಜಪಾನ್ ಕಿಟೊ ಮಾಹಿ ವಿರುದ್ಧ ವಿಜಯಿಯಾದರು.
ಮಹಿಳೆಯರ ಫ್ಲೈವೇಟ್ ವಿಭಾಗದಲ್ಲಿ ಮೀನಾಕ್ಷಿ (52ಕೆ.ಜಿ) ಜಪಾನ್‍ನ ಕಿನೊಶಿತಾ ರಿಂಕಾ ವಿರುದ್ಧ 1-4 ಅಂಕಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಸಾವೀಟಿ (81ಕೆ,ಜಿ), ಅಲೀಯಾ ಖಾನ್ ( 81 + ಕೆಜಿ) ಕಂಚು ಗೆದ್ದರು.

ಟೊಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಾಗಿನಿಂದಲೂ ಲಯ ಕಳೆದುಕೊಂಡಿದ್ದ 25 ವರ್ಷದ ಲವ್ಲಿನಾಗೆ ಈ ಗೆಲುವು ನೈತಿಕ ಸ್ಥೈರ್ಯ ತುಂಬಿದೆ. ಈ ಅಸ್ಸಾಂ ಬಾಕ್ಸರ್ ವಿಭಾಗವನ್ನು 69 ಕೆಜಿಯಿಂದ 75 ಕೆಜಿಗೆ ಬದಲಾಯಿಸಿದ್ದರು.
ಪುರುಷರ ವಿಭಾಗದಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟ ಆಡದ ಪ್ರವೀಣ್ ನಾಲ್ಕನೆ ಶ್ರೇಯಾಂಕಿತನ ವಿರುದ್ಧ ಅವಿರೋಧವಾಗಿ ಗೆದ್ದರು.