ಏಷ್ಯಾಕಪ್ ಮಹಿಳಾ ಹಾಕಿ – ಸೆಮೀಸ್ ಗೆ ಎಂಟ್ರಿಯಾದ ಭಾರತ – ವಿಶ್ವಕಪ್ ಹಾಕಿ ಟೂರ್ನಿಗೆ ಅರ್ಹತೆ…!
ಗುರ್ಜಿತ್ ಕೌರ್ ಅವರ ಹ್ಯಾಟ್ರಿಕ್ ಗೋಲುಗಳ ನೆರವನ್ನು ಪಡೆದ ಭಾರತ ಮಹಿಳಾ ಹಾಕಿ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಮಸ್ಕತ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ 9-1 ಗೋಲುಗಳಿಂದ ಸಿಂಗಾಪುರ ತಂಡವನ್ನು ಪರಾಭವಗೊಳಿಸಿತು.
ಲೀಗ್ ನ ಮೊದಲ ಪಂದ್ಯದಲ್ಲಿ ಮಲೇಶಿಯಾ ತಂಡವನ್ನು ಮಣಿಸಿದ್ದ ಭಾರತ ತಂಡ ನಂತರ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ 0-2ರಿಂದ ಅಚ್ಚರಿಯ ಸೋಲನ್ನು ಅನುಭವಿಸಿತ್ತು. Asia Cup hockey: India women hammer Singapore, enter semis
ಆದ್ರೆ ಲೀಗ್ ನ ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ ಸಿಂಗಾಪುರ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿತು.
ಭಾರತದ ಪರ ಗುರ್ಜಿತ್ ಕೌರ್ 8, 37 ಮತ್ತು 48ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರು. ಹಾಗೇ ಮೊನಿಕಾ ಆರು ಮತ್ತು 17ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ರೆ, ಜ್ಯೋತಿ 43 ಮತ್ತು 68ನೇ ನಿಮಿಷದಲ್ಲಿ ಗೋಲು ಬಾರಿಸಿದ್ರು.
FIH World Cup to be co-hosted by Spain and Netherlands.
ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಕೊರಿಯಾ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ಮತ್ತು ಚೀನಾ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ನ ಕೊನೆಯ ಪಂದ್ಯದಲ್ಲಿ ಜಪಾನ್ ಮಲೇಶಿಯಾ ತಂಡವನ್ನು 8-0 ಗೋಲುಗಳಿಂದ ಪರಾಭವಗೊಳಿಸಿತು.
ಫೈನಲ್ ಪಂದ್ಯ ಗುರುವಾರ ನಡೆಯಲಿದೆ. ಟೂರ್ನಿಯ ನಾಲ್ಕು ಅಗ್ರ ತಂಡಗಳು ಎಫ್ ಐಎಚ್ ವಿಶ್ವಕಪ್ ಗೆ ಅರ್ಹತೆಪಡೆದುಕೊಂಡಿವೆ. ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಸ್ಪೇನ್ ಮತ್ತು ನೆದರ್ಲೆಂಡ್ ಜಂಟಿಯಾಗಿ ಆಯೋಜನೆ ಮಾಡಿವೆ.