ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದ ಭಾರತದ ಸ್ಮತಿ ಮಂದಾನ
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ್ತಿ ಸ್ಮøತಿ ಮಂದಾನ ಅವರು ಪ್ರತಿಷ್ಠಿತ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಅಂದ ಹಾಗೇ ಸ್ಮøತಿ ಮಂದಾನ ಅವರು ಪ್ರತಿಷ್ಠಿತ ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2018ರಲ್ಲಿ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು.
India’s Smriti Mandhana is ICC women’s Cricketer of the Year!
ಅಷ್ಟೇ ಅಲ್ಲ, ಐಸಿಸಿ ಮಹಿಳಾ ವರ್ಷದ ಆಟಗಾರ್ತಿ ಪಡೆದ ಎರಡನೇ ಭಾರತದ ಆಟಗಾರ್ತಿಯಾಗಿದ್ದಾರೆ. ಈ ಹಿಂದೆ 2007ರಲ್ಲಿ ಭಾರತ ಮಹಿಳಾ ತಂಡದ ವೇಗದ ಬೌಲರ್ ಜುಲಾನ್ ಗೋಸ್ವಾಮಿ ಅವರು ಪಡೆದುಕೊಂಡಿದ್ದರು.
ಭಾರತ ಮಹಿಳಾ ತಂಡದ ಉಪನಾಯಕಿಯಾಗಿರುವ ಸ್ಮøತಿ ಮಂದಾನ ಅವರು ಈ ವರ್ಷದ ಐಸಿಸಿ ಮಹಿಳಾ ಟಿ-20 ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದರು.
ಇಂಗ್ಲೆಂಡ್ ನ ತಮೇಯ್ ಬ್ಯುಮೌಂಟ್, ದಕ್ಷಿಣ ಆಫ್ರಿಕಾದ ಲಿಝೆಲ್ ಲೀ ಮತ್ತು ಐರ್ಲೆಂಡ್ ನ ಗ್ಯಾಬಿ ಲೂಯಿಸ್ ಅವರ ಪ್ರತಿಸ್ಪರ್ಧೆಯ ನಡುವೆಯೂ ಸ್ಮøತಿ ಮಂದಾನ ಅವರು ಪ್ರಶಸ್ತಿ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ.
ರಾಚೆಲ್ ಹೈಹೊ ಫ್ಲಿಂಟ್ ಟ್ರೋಫಿಯನ್ನು ಪಡೆದ ಬಗ್ಗೆ ಸ್ಮøತಿ ಮಂದಾನ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪ್ರತಿಷ್ಠಿತ ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿ ಸಿಕ್ಕಿರುವುದು ಖುಷಿಯಾಗಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. 2022ರ ವರ್ಷದಲ್ಲೂ ಉತ್ತಮ ಪ್ರದರ್ಶನವನ್ನು ನೀಡುವುದನ್ನು ಎದುರು ನೋಡುತ್ತಿದ್ದೇನೆ. ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ 2022 ಮಹಿಳಾ ವಿಶ್ವಕಪ್ ನತ್ತ ಹೆಚ್ಚಿನ ಗಮನ ಹರಿಸಲಿದ್ದೇನೆ. ಉತ್ತಮ ಪ್ರದರ್ಶನ ನೀಡಿ ತಂಡದ ಯಶಸ್ಸಿಗೆ ಶ್ರಮಿಸುವುದಾಗಿ ಸ್ಮøತಿ ಮಂದಾನ ಹೇಳಿದ್ದಾರೆ.