ಐಪಿಎಲ್ನಲ್ಲಿ ಲೀಗ್ ಪಂದ್ಯಗಳು ಅಂತಿಮ ಹಂತದಲ್ಲಿದೆ. ಪ್ಲೇ-ಆಫ್ ಲೆಕ್ಕಾಚಾರ ಶುರುವಾಗಿದೆ. ಕೆಲ ತಂಡಗಳಿಗೆ ಗೆಲುವೊಂದೇ ಮಾರ್ಗವಾಗಿದ್ದರೆ, ಇನ್ನು ಕೆಲ ತಂಡಗಳಿವೆ ರನ್ ರೇಟ್ ಲೆಕ್ಕಾಚಾರವೂ ಇದೆ. ಈ ಮಧ್ಯೆ ಪ್ಲೇ-ಫ್ ಸ್ಥಾನವನ್ನು ಭದ್ರ ಮಾಡಿಕೊಳ್ಳಲು ಗುಜರಾತ್ ತಯಾರಾಗಿದೆ. ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಉಳಿದುಕೊಳ್ಳಲು ಆಡಲಿದೆ.
ಏನ್ ಸುದ್ದಿ..?
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಹಾರ್ದಿಕ್ ಪಾಂಡ್ಯಾ 3 ಪಂದ್ಯಗಲ್ಲಿ ಬೌಲಿಂಗ್ ಮಾಡಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧ ಬೌಲಿಂಗ್ ಮಾಡ್ತಾರಾ ಅನ್ನುವ ಕುತೂಹಲವಿದೆ.
ಯಶ್ ದಯಾಳ್ ಗಾಯಗೊಂಡ ಕಾರಣದಿಂದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ದಯಾಳ್ ಸ್ಥಾನದಲ್ಲಿ ಪ್ರದೀಪ್ ಸಂಗ್ವಾನ್ ಆಡಿ 19 ರನ್ ಗಳಿಗೆ 2 ವಿಕೆಟ್ ಪಡೆದಿದ್ದರು. ಈಗ ದಯಾಳ್ ಫಿಟ್ ಆದರೆ ಸಂಗ್ವಾನ್ಗೆ ಅವಕಾಶ ಸಿಗುತ್ತಾ ಅನ್ನುವ ಪ್ರಶ್ನೆ ಇದೆ.
ರಶೀದ್ ಅಸ್ತ್ರ:
ಗುಜರಾತ್ ಟೈಟಾನ್ಸ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವುದು ಅಪರೂಪ. ಆದರೆ ಶಿಖರ್ ಧವನ್ ಮತ್ತು ಮಯಾಂಕ್ ಅಗರ್ವಾಲ್ ಕ್ರೀಸ್ ನಲ್ಲದ್ದಾಗ ಬೌಲಿಂಗ್ ಮಾಡಬಹುದು. ಧವನ್ ರಶೀದ್ ವಿರುದ್ಧ 44 ಎಸೆಗಳಲ್ಲಿ 41 ರನ್ ಮಾತ್ರ ಸಿಡಿಸಿದ್ದಾರೆ. ಅಷ್ಟೇ ಅಲ್ಲ 4 ಬಾರಿ ಔಟ್ ಆಗಿದ್ದಾರೆ. ಮಯಾಂಕ್ ಅಗರ್ವಾಲ್ ರಶೀದ್ ಖಾನ್ ವಿರುದ್ಧ ಎದುರಿಸಿದ 23 ಎಸೆತಗಳಲ್ಲಿ 23 ರನ್ ಮಾತ್ರ ಗಳಿಸಿದ್ದಾರೆ. ಜೊತೆ ಒಂದು ಬಾರಿ ಔಟ್ ಕೂಡ ಆಗಿದ್ದಾರೆ.
ಕಿಲ್ಲರ್ ಮಿಲ್ಲರ್:
ಗುಜರಾತ್ ಟೈಟಾನ್ಸ್ನ ಮಧ್ಯಮ ಸರದಿಯ ಆಟಗಾರ ಡೇವಿಡ್ ಮಿಲ್ಲರ್ ಎದುರಾಗಳಿ ಬೌಲರ್ಗಳ ಪಾಲಿಗೆ ಕಿಲ್ಲರ್ ಆಗಿದ್ದಾರೆ. ಮಧ್ಯಮ ಸರದಿಯಲ್ಲಿ ಮಿಲ್ಲರ್ 276 ರನ್ಗಳಿಸಿರುವುದು ಮಾತ್ರವಲ್ಲದೆ, 150.81ರ ಸರಾಸರಿ ಹೊಂದಿದ್ದಾರೆ. ಆದರೆ ಕಗಿಸೋ ರಬಾಡಾ ಮುಂದೆ ಮಿಲ್ಲರ್ 30 ಎಸೆತಗಳಲ್ಲಿ 32 ರನ್ ಮಾತ್ರ ಗಳಿಸಿದ್ದಾರೆ.
ನಂಬರ್ ಗೇಮ್:
- ರಬಾಡಾ ಬೌಲಿಂಗ್ ನಲ್ಲಿ ಶುಭ್ಮನ್ ಗಿಲ್ 2 ಬಾರಿ ಔಟ್ ಆಗಿದ್ದಾರೆ.
- ಮೊಹ್ಮದ್ ಶಮಿ ಬೌಲಿಂಗ್ ಎದುರು ಶಿಖರ್ ಧವನ್ 69 ಎಸೆತಗಳಲ್ಲಿ 86 ರನ್ ಸಿಡಿಸಿದ್ದಾರೆ.
- ರಶೀದ್ ಖಾನ್ ಬೌಲಿಂಗ್ನಲ್ಲಿ ಲಿಯಂ ಲಿವಿಂಗ್ಸ್ಟೋನ್ 4 ಬಾರಿ ಔಟಾದರೂ 52 ಎಸೆತಗಳಲ್ಲಿ 86 ರನ್ ದೋಚಿದ್ದಾರೆ.
- ಮಿಲ್ಲರ್ ಮತ್ತು ತೇವಾಟಿಯಾ ನಡುವೆ 6 ಇನ್ನಿಂಗ್ಸ್ ಗಳಲ್ಲಿ 236 ರನ್ಗಳ ಜೊತೆಯಾಟ ಬಂದಿದೆ. ಇವರ ರನ್ ರೇಟ್ 10.48 ರಷ್ಟಿದೆ.