2022 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ನಾಯಕತ್ವವನ್ನು ಪೃಥ್ವಿ ಶಾ ವಹಿಸಿಕೊಂಡಿದ್ದಾರೆ. ಭಾರತ ಟೆಸ್ಟ್ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಕೂಡ ಈ ತಂಡದ ಭಾಗವಾಗಿರಲಿದ್ದಾರೆ.
ರಹಾನೆ ಬ್ಯಾಟ್ಸ್‌ಮನ್ ಆಗಿ ತಂಡದ ಭಾಗವಾಗಲಿದ್ದಾರೆ. ಸಲೀಲ್ ಅಂಕೋಲಾ ನೇತೃತ್ವದ ಆಯ್ಕೆ ಸಮಿತಿ ಇನ್ನೆರಡು ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಭಾರತ ತಂಡದ ನಾಯಕನಾಗಿ ರಹಾನೆ ಅವರ ದಾಖಲೆ ಅತ್ಯುತ್ತಮವಾಗಿದೆ, ಆದರೆ ರಣಜಿ ಟ್ರೋಫಿಯಲ್ಲಿ ಅವರ ಸ್ಥಾನಕ್ಕೆ ಶಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.
ಆಯ್ಕೆ ಸಮಿತಿ, ಕೋಚ್ ಅಮೋಲ್ ಮುಜುಂದಾರ್ ಮತ್ತು ಅಸೋಸಿಯೇಷನ್ ಒಟ್ಟಾಗಿ ರಹಾನೆ ಅವರೊಂದಿಗೆ ಮಾತನಾಡಿದ್ದು, ಇದಾದ ಬಳಿಕವಷ್ಟೇ ಪೃಥ್ವಿ ಶಾ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ.
ಡಿಸೆಂಬರ್‌ನಲ್ಲಿ ರಹಜಿ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡಲಾಯಿತು. ಜನವರಿ 13 ರಂದು ಪಂದ್ಯಾವಳಿ ಆರಂಭವಾಗಲಿರುವ ಸಂದರ್ಭದಲ್ಲಿ ರಹಾನೆ ದಕ್ಷಿಣ ಆಫ್ರಿಕಾದಲ್ಲಿದ್ದರು. ಇದೇ ಸಮಯದಲ್ಲಿ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ಜನವರಿ 15 ರಂದು ಕೊನೆಗೊಂಡಿತು. ತಂಡದ ಆಯ್ಕೆ ವೇಳೆ ರಹಾನೆ ಮೊದಲ ಬಾರಿಗೆ ಲಭ್ಯರಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಶಾ ಅವರನ್ನು ನಾಯಕರನ್ನಾಗಿ ಮಾಡಲಾಯಿತು, ಆದರೆ ಕೊರೋನಾದಿಂದಾಗಿ ಪಂದ್ಯಾವಳಿಯನ್ನು ಮುಂದೂಡಲಾಯಿತು.
ಇದೀಗ ರಹಾನೆ ತಂಡ ಸೇರಿಕೊಂಡಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಸೇರಿದರೆ, ಅವರು ಮತ್ತೆ ತಂಡದ ಭಾಗವಾಗುವುದಿಲ್ಲ. ಈ ಕಾರಣದಿಂದ ಶಾ ಅವರನ್ನು ನಾಯಕನನ್ನಾಗಿ ಮಾಡುವುದು ಉತ್ತಮ ಎಂದು ಮುಂಬೈ ಕ್ರಿಕೆಟ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಶಾ ಅವರ ನಾಯಕತ್ವದಲ್ಲಿ ಮುಂಬೈ 2021 ರಲ್ಲಿ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತು.