36th National Games: ಲಕ್ಷ್ಯ ಕೂಟ ದಾಖಲೆ, ಪುರುಷರ, ಮಹಿಳಾ ಜೋಡಿ ಫೈನಲ್ ಗೆ
ಲಕ್ಷ್ಯ ಎಸ್. 36ನೇ ರಾಷ್ಟ್ರೀಯ ಕ್ರೀಡಾ ಕೂಟದ ಈಜು ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.
ಮಹಿಳೆಯರ 200 ಮೀಟರ್ ಬ್ರೇಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಲಕ್ಷ್ಯ 2:42.63 ಸೆಕೆಂಡ್ ಗಳಲ್ಲಿ ನಿಗದಿತ ದೂರ ಕ್ರಮಿಸಿ ಬಂಗಾರ ಪಡೆದರು. ಅಲ್ಲದೆ ತಮ್ಮದೇ ದಾಖಲೆಯನ್ನು ಉತ್ತಮ ಪಡೆಸಿಕೊಂಡಿದ್ದಾರೆ. ಈ ವಿಭಾಗದ ಬೆಳ್ಳಿ ಚಾಹತ್ ಆರೋರ್ ಪಾಲಾದರೆ, ನಮ್ಮದೇ ರಾಜ್ಯದ ಹರ್ಷಿತಾ ಜಯರಾಮ್ ಅವರಿಗೆ ಕಂಚು ಲಭಿಸಿದೆ.
ಕರ್ನಾಟಕ ಮಹಿಳಾ ತಂಡ 4×100 ಮೆಡ್ಲಿಯಲ್ಲಿ 4:27.78 ಸೆಕೆಂಡ್ ಗಳಲ್ಲಿ ಕ್ರಮಿಸಿದೆ. ಉಳಿದಂತೆ ಈ ವಿಭಾಗದ ಬೆಳ್ಳಿ ಮಹರಾಷ್ಟ್ರ, ಕಂಚು ಬಂಗಾಳ ಪಾಲಾಗಿದೆ. ಇನ್ನು ಪುರುಷರ ತಂಡ ಇದೇ ವಿಭಾಗದಲ್ಲಿ ಬೆಳ್ಳಿ ಪಡೆದಿದೆ.
ರಾಜ್ಯದ ಪುರುಷರ ಹಾಗೂ ಮಹಿಳಾ ಟೆನಿಸ್ ಡಬಲ್ಸ್ ಜೋಡಿ ಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆದಿಲ್ ಕಲ್ಯಾಣಪುರ ಮತ್ತು ಎಸ್‌ಡಿ ಪ್ರಜ್ವಲ್ ದೇವ್ 5-7, 6-3, 10-6 ರಿಂದ ಆಂಧ್ರಪ್ರದೇಶದ ಶಿವದೀಪ್ ಕೊಸರಾಜು ಮತ್ತು ಅನಂತ್ ಮಣಿ ಮುನಿ ಅವರನ್ನು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.
ಮಹಿಳೆಯರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸೋಹಾ ಸಾದಿಕ್ ಮತ್ತು ಶರ್ಮದಾ ಬಾಲು ಜೋಡಿ 6-2, 6-1 ಸೆಟ್‌ಗಳಿಂದ ಹರಿಯಾಣದ ಸಂದೀಪ್ತಿ ಸಿಂಗ್ ಮತ್ತು ರಿತು ಓಹ್ಲ್ಯಾನ್ ಜೋಡಿಯನ್ನು ಸೋಲಿಸಿತು.
ರಾಜ್ಯದ ಮೂವರು ಆಟಗಾರರು ಸಿಂಗಲ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಎಸ್‌ಡಿ ಪ್ರಜ್ವಲ್ ದೇವ್ ಮತ್ತು ಮನೀಷ್ ಜಿ ಅವರು ಕೊನೆಯ ನಾಲ್ಕರ ಘಟ್ಟಕ್ಕೆ ಮುನ್ನಡೆದಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಶರ್ಮದಾ ಬಾಲು 1-6, 6-3, 6-1 ಸೆಟ್‌ಗಳಿಂದ ತೆಲಂಗಾಣದ ಪಾವನಿ ಪಾಠಕ್ ಅವರನ್ನು ಸೋಲಿಸಿ ಕೊನೆಯ ನಾಲ್ಕು ಹಂತಕ್ಕೆ ಲಗ್ಗೆ ಇಟ್ಟರು.
36th National Games, Lakshya, Final, Record,