ಶಿಮ್ರಾನ ಹೇಟ್ಮಯರ್ ಅವರ ಕೈಬಿಟ್ಟ ವಿಂಡೀಸ್ ಕ್ರಿಕೆಟ್ ಮಂಡಳಿ- ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ಗೆ ಹೇಟ್ಮಯರ್ ಅವರನ್ನು ಕೈಬಿಟ್ಟಿದೆ.
ಮಹತ್ವದ ಬೆಳವಣಿಗೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮುಂಬರುವ ಟಿ20 ವಿಶ್ವಕಪ್ಗೆ ಮಿಡ್ಲ್ ಆರ್ಡರ್ ಬ್ಯಾಟರ್ .ಶಿಮ್ರಾನ ಹೇಟ್ಮಯರ್ ಅವರನ್ನು ಕೈಬಿಟ್ಟಿದೆ.
ಪ್ರತಿಷ್ಠಿತ ಟೂರ್ನಿಗೆ ವಿಂಡೀಸ್ ಕ್ರಿಕೆಟ್ ಮಂಡಳಿ ತಂಡವನ್ನು ಮತ್ತೆ ಪರಿಷ್ಕೃತಗೊಳಿಸಿದೆ. ವೈಯಕ್ತಿಕ ಕಾರಣಕ್ಕಾಗಿ ಮೊದಲ ಎರಡು ಅಭ್ಯಾಸ ಪಂದ್ಯಗಳಿಗೆ ಅಲಭ್ಯರಾಗುವುದಾಗಿ ಹೇಟ್ಮಯರ್ ತಿಳಿಸಿದ್ದರು.
ಗಯಾನದಿಂದ ವಿಮಾನ ದಲ್ಲಿ ಸಿಗುವುದು ಅನುಮಾನದಿಂದ ಕೂಡಿದೆ. ಅ.5ರಂದು ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಅಭ್ಯಾಸ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ವಿಮಾನದ ಅಲಭ್ಯತೆ ಕುರಿತು ಹೇಟ್ಮಯರ್ ಮಂಡಳಿಯ ನಿರ್ಧೆಶಕರಿಗೆ ಮಾಹಿತಿ ನೀಡಿದ್ದಾರೆ.
ಹೇಟ್ಮಯರ್ ಅವರ ಸ್ಥಾನದಲ್ಲಿ ಶಾಮಾರ್ಹ ಬ್ರೂಕ್ಸ್ ಆಡಲಿದ್ದಾರೆ. 34 ವರ್ಷದ ಬ್ರೂಕ್ಸ್ ತಂಡದ ಪರ 11 ಟಿ20 ಪಂದ್ಯಗಳನ್ನು ಆಡಲಿದ್ದಾರೆ. ಸಾಧ್ಯವಾದಷ್ಟು ಬೇಗ ಕಾಂಗರೂ ನಾಡಿಗೆ ಪ್ರಯಾಣ ಬೆಳಸಲಿದ್ದಾರೆ.
ವೈಯಕ್ತಿ ಕಾರಣಗಳಿಂದಾಗಿ ಶಿಮ್ರಾನ್ ಹೇಟ್ಮಯರ್ ಅವರಿಗೆ ಶನಿವಾರ ಬದಲು ಸೋಮವಾರ ತಂಡವನ್ನು ಸೇರಿಕೊಳ್ಳಲು ಸಮಯಾವಕಾಶ ಕೊಟ್ಟಿದ್ದೇವೆ. ಮತ್ತೆ ತಂಡ ಸೇರಿಕೊಳ್ಳಲು ತಡವಾದರೆ ಆಡಲು ಅವಕಾಶ ಸಿಗುವುದಿಲ್ಲ. ತಂಡದ ಸಾಮರ್ಥ್ಯದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ಶಿಮ್ರಾನ ಹೇಟ್ಮಯರ್ ಅವರ ಕೈಬಿಟ್ಟ ವಿಂಡೀಸ್ ಕ್ರಿಕೆಟ್ ಮಂಡಳಿ- ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ಗೆ ಹೇಟ್ಮಯರ್ ಅವರನ್ನು ಕೈಬಿಟ್ಟಿದೆ.