36th National Games: ಅನೀಶ್, ಹಶೀಕಾ ಕೂಟ ದಾಖಲೆ
ಭರವಸೆಯ ಕರ್ನಾಟಕದ ಈಜು ಪಟು ಅನೀಶ್ ಎಸ್.ಗೌಡ ಹಾಗೂ ಹಶೀಕಾ ರಾಮಚಂದ್ರ 36ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.
ರಾಜಕೋಟ್ ನಲ್ಲಿ ಭಾನುವಾರ ನಡೆದ ಪುರುಷರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಅನೀಶ್ ನಿಗದಿತ ಗುರಿಯನ್ನು 1:51.88 ಸೆಕೆಂಡ್ ಗಳಲ್ಲಿ ಕ್ರಮಿಸಿ ಕೂಟ ದಾಖಲೆಯನ್ನು ನಿರ್ಮಿಸಿದರು. ಇವರು ಕೇರಳದ ಆರೋನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಕೇರಳದ ಸಾಜನ್ ಪ್ರಕಾಶ್ ಗೆ ಬೆಳ್ಳಿ, ದೆಹಲಿಯ ವಿಶಾಲ್ ಗೆ ಕಂಚು ಲಭಿಸಿದೆ.
ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಹಶೀಕಾ ರಾಮಚಂದ್ರ ನೂತನ ಕೂಟ ದಾಖಲೆ ನಿರ್ಮಿಸಿದರು. ಇವರು 2:07.08 ಸೆಕೆಂಡ್ ಗಳಲ್ಲಿ ಕ್ರಮಿಸಿ ಬಂಗಾರ ಪಡೆದರು. ಅಲ್ಲದೆ ನಮ್ಮದೇ ರಾಜ್ಯದ ದಿನಿಧಿ ಡಿ ಅವರು ಬೆಳ್ಳಿ, ದೆಹಲಿಯ ಭಾವ್ಯ ಎಸ್ ಕಂಚು ಪಡೆದರು.
ಉಳಿದಂತೆ ಮಹಿಳೆಯರ 100 ಮೀಟರ್ ಬಟರ್ ಫ್ಲೈನಲ್ಲಿ ಕರ್ನಾಟಕದ ತನೀಶ್ ಗುಪ್ತಾ ಬೆಳ್ಳಿ, ನಿನಾ ವೆಂಕಟೇಶ್ ಕಂಚು ಪಡೆದರು. ಈ ವಿಭಾಗದ ಬಂಗಾರ ಆಸ್ಸಾಂನ ಆಸ್ತಾ ಚೌಧರಿ ಪಾಲಾಯಿತು.
ಪುರುಷರ ಹಾಗೂ ಮಹಿಳೆಯ 4*100 ಮೀಟರ್ ಫ್ರೀಸ್ಟ್ರೈಲ್ ವಿಭಾಗದಲ್ಲಿ ಕರ್ನಾಟಕ ಬಂಗಾರ ಪಡೆದಿದೆ.
36th National Games, Karnataka, Anish S. Gowda