Premier League: ಮ್ಯಾಚಿಂಸ್ಟರ್ ಸಿಟಿ ಜಯದಲ್ಲಿ ಮಿಂಚಿದ ಎರ್ಲಿಂಗ್ ಹಾಲೆಂಡ್- ಫಿಲ್ ಫೋಡೆನ್
ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮ್ಯಾಂಚಿಸ್ಟಾರ್ ಸಿಟಿ 6-3 ರಿಂದ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಮಣಿಸಿತು.
ಎರ್ಲಿಂಗ್ ಹಾಲೆಂಡ್ (34, 37, 64ನೇ ನಿಮಿಷ), ಫಿಲ್ ಫೋಡೆನ್ (8, 44, 72ನೇ ನಿಮಿಷ) ಗೋಲು ಬಾರಿಸಿ ಮ್ಯಾಂಚಿಸ್ಟಾರ್ ಸಿಟಿ ಗೆಲುವಿನಲ್ಲಿ ಮಿಂಚಿದರು. ಆಂಟೋನಿ (56ನೇ ನಿಮಿಷ) ಎ. ಮಾರ್ಷಲ್ (84ನೇ ನಿಮಿಷ) ಎ. ಮಾರ್ಷಲ್ (90+1 ನೇ ನಿಮಿಷ) ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಗೋಲು ಸಿಡಿಸಿ ಸೋಲಿನಲ್ಲಿ ಮಿಂಚಿದರು. ಈ ಗೆಲುವಿನ ಮೂಲಕ ಮ್ಯಾಂಚೆಸ್ಟರ್ ಸಿಟಿ ತಂಡ ಆಡಿದ ಎಂಟು ಪಂದ್ಯಗಳಿಂದ 20 ಅಂಕ ಕಲೆ ಹಾಕಿದ್ದು ಎರಡನೇ ಸ್ಥಾನ ಭಧ್ರ ಪಡಿಸಿಕೊಂಡಿದೆ.
ಆರಂಭದಿಂದಲೂ ಮ್ಯಾಂಚಿಸ್ಟಾರ್ ಸಿಟಿ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರಲು ಪ್ರಯತ್ನಿಸಿತು. ಈ ಅವಧಿಯ ಎಂಟನೇ ನಿಮಿಷದಲ್ಲಿ ಫಿಲ್ ಫೋಡೆನ್ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಎರ್ಲಿಂಗ್ ಹಾಲೆಂಡ್ ಕೇವಲ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿ ಗೋಲಿನ ಅಂತರವನ್ನು ಹೆಚ್ಚಿಸಿದರು. ಮೊದಲ ಅವಧಿಯ ಕೊನೆಯ ಕ್ಷಣದಲ್ಲಿ ಫಿಲ್ ಫೋಡೆನ್ ಮತ್ತೊಂದು ಗೋಲು ಬಾರಿಸಿದರು. ಈ ಅವಧಿಯಲ್ಲಿ ಮ್ಯಾಚಿಂಸ್ಟರ್ ಸಿಟಿ 4-0 ಮುನ್ನಡೆ ಸಾಧಿಸಿತು.
ಎರಡನೇ ಅವಧಿಯ ಆರಂಭದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೋಲು ಬಾರಿಸಿತು. ಆದರೆ ಈ ಗೋಲಿನ ಬಳಿಕ ಮ್ಯಾಚಿಂಸ್ಟರ್ ಸಿಟಿ ಮತ್ತೇರಡು ಗೋಲು ದಾಖಲಿಸಿತು.
84 ನೇ ನಿಮಿಷ ಹಾಗೂ ಹೆಚ್ಚುವರಿ ಸಮಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೋಲು ಸಿಡಿಸಿ ಅಂತರವನ್ನು ಕಡಿಮೆ ಮಾಡಿತು.
Premier League, Football, Manchester City, Manchester United, sports,