ಈ ಬಾರಿಯ ಐಪಿಎಲ್ನಲ್ಲಿ ಹೊಸ ಹೊಸ ದಾಖಲೆಗಳು ಬರೆಯಲ್ಪಟ್ಟಿವೆ. ಐಪಿಎಲ್ ಇರುವುದೇ ದಾಖಲೆ ಬರೆಯಲು ಅನ್ನುವ ಮಾತಿಗೆ ತಕ್ಕಂತೆ ಟೂರ್ನಿ ನಡೆದಿದೆ. ವಿಶ್ವದ ಯಾವುದೇ ಟೂರ್ನಿಯಲ್ಲೂ ದಾಖಲಾಗದ ದಾಖಲೆಗಳು ಈ ಬಾರಿಯ ಐಪಿಎಲ್ನಲ್ಲಿ ಬರೆಯಲ್ಪಟ್ಟಿದೆ. ಒಂದೇ ಟೂರ್ನಿಯಲ್ಲಿ ಸಾವಿರಕ್ಕಿಂತಲೂ ಅಧಿಕ ಸಿಕ್ಸರ್ಗಳು ಸಿಡಿದಿವೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಅಪರೂಪ.
ಐಪಿಎಲ್ನಲ್ಲಿ ಸಿಕ್ಸರ್ ಸಿಡಿಯದೇ ಇದ್ದರೆ ಅದಕ್ಕೆ ಮಜಾನೇ ಇರುವುದಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಬೇಕಾದಷ್ಟು ಸಿಕ್ಸರ್ ಗಳು ಸಿಡಿದಿವೆ. ಹಿಂದಿನ ಎಲ್ಲಾ ದಾಖಲೆಗಳು ಉಡೀಸ್ ಆಗಿವೆ. ಇನ್ನೂ 4 ಪಂದ್ಯಗಳು ಈ ಬಾರಿಯ ಐಪಿಎಲ್ನಲ್ಲಿ ಬಾಕಿ ಉಳಿದಿವೆ. ಆದರೆ ಸಿಕ್ಸರ್ ಗಳ ಸಂಖ್ಯೆ ಈಗಾಗಲೇ 1001ಕ್ಕೇರಿದೆ. ಪ್ರತೀ ಪಂದ್ಯದಲ್ಲೂ 14.3 ಸರಾಸರಿಯಂತೆ ಸಿಕ್ಸರ್ಗಳು ಸಿಡಿದಿವೆ.
ಈ ಹಿಂದೆ 2018ರ ಐಪಿಎಲ್ನಲ್ಲಿ 872 ಸಿಕ್ಸರ್ ಸಿಡಿದಿತ್ತು. ಆರೆ ಆಗ ಕೇವಲ 60 ಪಂದ್ಯ ಮಾತ್ರ ನಡೆದಿತ್ತು. ಪಂದ್ಯವೊಂದಕ್ಕೆ 14.53 ರಂತೆ ಸಿಕ್ಸರ್ ಸಿಡದಿದ್ದವು. ಈ ಬಾರಿ 10 ತಂಡಗಳು ಇದ್ದಿದ್ದರಿಂದ ಪಂದ್ಯಗಳು ಹೆಚ್ಚಾಗಿತ್ತು. ಹಾಗಾಗಿ ಸಿಕ್ಸರ್ಗಳು ಹೆಚ್ಚಿವೆ. ಆದರೆ ಸರಾಸರಿ ವಿಷಯದಲ್ಲಿ 2018ರರ ಅಂಕಿ ಸಂಖ್ಯೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಇನ್ನುಳಿದ 4 ಪಂದ್ಯಗಳಲ್ಲಿ ಹೆಚ್ಚು ಸಿಕ್ಸರ್ ಗಳು ಸಿಡಿದರೆ ಐಪಿಎಲ್ ಇತಿಹಾಸ ಬದಲಾಗುವುದು ಖಚಿತ.
ಸಿಕ್ಸರ್ ಲೆಕ್ಕ
ವರ್ಷ ಸಿಕ್ಸರ್ ಪಂದ್ಯ ಸರಾಸರಿ
- 2008 622 59 10.54
- 2009 506 59 8.58
- 2010 585 60 9.75
- 2011 639 74 8.64
- 2012 731 76 9.62
- 2013 672 76 8.84
- 2014 714 60 11.90
- 2015 692 60 11.53
- 2016 638 60 10.63
- 2017 705 60 11.75
- 2018 872 60 14.53
- 2019 784 60 13.07
- 2020 734 60 12.23
- 2021 687 60 11.45
- 2022 1001 70 14.30