ಟೀಮ್ ಇಂಡಿಯಾದ (TeamIndia) ಲೆಗ್ಸ್ಪಿನ್ನರ್ (Leg Spinner) ಯಜುವೇಂದ್ರ ಚಹಲ್ (Yuzvendra Chahal) ವಿಶ್ವ ಕ್ರಿಕೆಟ್ನ ಬುದ್ಧಿವಂತ ಬೌಲರ್. ಈತನ ಬೌಲಿಂಗ್ನಲ್ಲಿ ವೇಗವಿಲ್ಲ. ಆದರೆ ಚಾಣಾಕ್ಯತನವಿದೆ. ಶೇನ್ವಾರ್ನ್ರಂತೆ (Shane Warne) ಮೀಟರ್ಗಟ್ಟಲೆ ಸ್ಪಿನ್ ಆಗುವುದಿಲ್ಲ. ಆದರೆ ಬ್ಯಾಟ್ಸ್ಮನ್ ಬೇಗನೆ ವಂಚಿತರಾಗುತ್ತಾರೆ. ಮುರಳೀಧರನ್ (Muttaiah Muralitharan)ತರಹ ಭಯ ಹುಟ್ಟಿಸುವ ಬೌಲರ್ ಕೂಡ ಆಲ್ಲ. ಆದರೆ ಇವರೆಲ್ಲರಿಗಿಂತಲೂ ಚಹಲ್ ಅದ್ಭುತ.
ಚಹಲ್ ಬೌಲಿಂಗ್ ಮಾಡ್ತಿದ್ದಾಗ ಸುಲಭವಾಗಿ ರನ್ಗಳಿಸಬಹುದು ಅನ್ನುವ ಫೀಲ್ ಬ್ಯಾಟ್ಸ್ಮನ್ಗೆ ಬರುತ್ತದೆ. ಕಣ್ಣಮುಂದೆಯೇ ಫ್ಲೈಟ್ ಮಾಡಿ ಬ್ಯಾಟ್ಸ್ಮನ್ಗಳನ್ನ ದೊಡ್ಡ ಹೊಡೆತಕ್ಕೆ ಆಹ್ವಾನಿಸತ್ತಾರೆ. ಅಲ್ಲೇ ಚಹಲ್ ಚಮಕ್ ಅಡಗಿರುತ್ತದೆ. ವಿಕೆಟ್ ಬೀಳುತ್ತದೆ. ಬ್ಯಾಟ್ಸ್ಮನ್ ಪವೆಲಿಯನ್ ಕಡೆ ಹೆಜ್ಜೆ ಹಾಕುತ್ತಾನೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲೂ(Lord Cricet ground) ಟೀಮ್ ಇಂಡಿಯಾ ಸ್ಪಿನ್ನರ್ ಚಹಲ್ 39 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಪಡೆದ ಚಹಲ್, ಲಾರ್ಡ್ಸ್ ಮೈದಾನದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂದು ಗುರುತಿಸಿಕೊಂಡಿದ್ದಾರೆ. 1983ರ ವಿಶ್ವಕಪ್ ನಲ್ಲಿ ಅಮರನಾಥ್ 3 ವಿಕೆಟ್ ಪಡೆದಿದ್ದರು. ಆದರೆ ಚಹಲ್ ಎರಡನೇ ಪಂದ್ಯದಲ್ಲಿ 10 ಓವರ್ಗಳ ಬೌಲಿಂಗ್ ಮಾಡಿ 47 ರನ್ ಬಿಟ್ಟುಕೊಟ್ಟು ಬೈರ್ಸ್ಟೋವ್, ರೂಟ್, ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನು ಪೆವಿಲಿಯನ್ಗೆಸ ಅಟ್ಟಿದ್ದರು.
- ಕೊನೆಯ 5 ವರ್ಷಗಳ ಟಾಪ್ ಬೌಲರ್ (11 ರಿಂದ 40 ಓವರ್)
ಕುಲ್ದೀಪ್ ಯಾದವ್ 79 ವಿಕೆಟ್ 5.16 ಎಕಾನಮಿ
ಯಜುವೇಂದ್ರ ಚಹಲ್ 75ವಿಕೆಟ್ 5.09 ಎಕಾನಮಿ
ಆದಿಲ್ ರಶೀದ್ 67ವಿಕೆಟ್ 5.34 ಎಕಾನಮಿ
ರಶೀದ್ ಖಾನ್ 62 ವಿಕೆಟ್ 3.90 ಎಕಾನಮಿ
ಮೆಹದಿ ಹಸನ್ 48 ವಿಕೆಟ್ 4.25 ಎಕಾನಮಿ
ಕಳೆದ 5 ವರ್ಷಗಳಲ್ಲಿ 11 ರಿಂದ 40 ಓವರುಗಳ ತನಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಚಹಲ್ 2ನೇ ಸ್ಥಾನದಲ್ಲಿದ್ದಾರೆ. ಚಹಲ್ ಈ ಅವಧಿಯಲ್ಲಿ 75 ವಿಕೆಟ್ ಕಬಳಿಸಿದ್ದರೆ, ಭಾರತದವರೇ ಆದ ಕುಲ್ದೀಪ್ ಯಾದವ್ 79 ವಿಕೆಟ್ ಸಂಪಾದಿಸಿದ್ದಾರೆ. ಇಂಗ್ಲೆಂಡ್ನ ಆದಿಲ್ ರಶೀದ್ 67 ವಿಕೆಟ್ ಪಡೆದಿದ್ದರೆ, ಅಫ್ಘಾನಿಸ್ತಾನದ ರಶೀದ್ ಖಾನ್ 62 ಹಾಗೂ ಬಾಂಗ್ಲಾದ ಮೆಹದಿ ಹಸನ್ 48 ವಿಕೆಟ್ ಪಡೆದಿದ್ದಾರೆ.
ಅಚ್ಚರಿ ಅಂದರೆ ಮಿಡಲ್ ಓವರುಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ನಾಲ್ವರು ಲೆಗ್ ಸ್ಪಿನ್ನರ್ಗಳೇ ಆಗಿದ್ದಾರೆ. ಇಲ್ಲಿ ಕುಲ್ದೀಪ್ ಚೈನಾಮನ್ ಬೌಲರ್ ಆಗಿದ್ದರೂ ಎಡಗೈ ಲೆಗ್ಸ್ಪಿನ್ನರ್. ಮೆಹದಿ ಹಸನ್ ಮಾತ್ರ ಆಫ್ ಸ್ಪಿನ್ ಬೌಲರ್ ಆಗಿದ್ದಾರೆ. ಒಟ್ಟಿನಲ್ಲಿ ಚಹಲ್ ಮ್ಯಾಜಿಕ್ನಿಂದ ಟೀಮ್ ಇಂಡಿಯಾಕ್ಕೆ ಲಾರ್ಡ್ಸ್ನಲ್ಲಿ ಗೆಲುವು ಸಿಕ್ಕಿಲ್ಲವಾದರೂ ಗೌರವ ಸಿಕ್ಕಿದೆ.