Yuvraj Singh -Rishab Pant – ಯುವರಾಜ್ ಇ- ಸಂಭಾಷಣೆಗೆ ಪಂತ್ ರಿಯಾಕ್ಷನ್..!

ನಿಮಗೆ ನೆನಪಿರಬಹುದು. 2002ರ ನ್ಯಾಟ್ ವೆಸ್ಟ್ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದ್ದು.
ಹೌದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದು ಯುವರಾಜ್ ಸಿಂಗ್ ಮತ್ತು ಮಹಮ್ಮದ್ ಕೈಫ್.
ಅದೇ ರೀತಿ 20 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಕೂಡ ರೋಚಕ ಜಯ ಸಾಧಿಸಿತ್ತು. ಈ ಬಾರಿ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದ್ದು ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ. ಈ ಎರಡು ಪಂದ್ಯಗಳಲ್ಲೂ ಕೂಡ ಟೀಮ್ ಇಂಡಿಯಾ ಸೋಲಿನ ಭೀತಿಗೆ ಸಿಲುಕಿ ಕೊನೆಗೆ ಗೆಲುವಿನ ನಗೆ ಬೀರಿದ್ದು ವಿಶೇಷ.
ಅಂದ ಹಾಗೇ ಈ ಪಂದ್ಯದಲ್ಲಿ ರಿಷಬ್ ಪಂತ್ ಅವರು ಅಜೇಯ 125 ರನ್ ಸಿಡಿಸಿದರು. ಅಲ್ಲದೆ ತಂಡಕ್ಕೆ ಅರ್ಹ ಗೆಲುವನ್ನು ತಂದುಕೊಟ್ಟರು. ಇಂಗ್ಲೆಂಡ್ ನೆಲದಲ್ಲಿ ಮೂರನೇ ಬಾರಿ

ಟೀಮ್ ಇಂಡಿಯಾ ಸರಣಿ ಗೆಲ್ಲುವಂತೆಯೂ ಮಾಡಿದ್ದರು.
ಇನ್ನು ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿರುವುದು ರಿಷಬ್ ಪಂತ್ ಅವರ ಮ್ಯಾಚ್ ವಿನ್ನಿಂಗ್ ಸೆಂಚುರಿ. ಇಲ್ಲಿ ರೋಹಿತ್, ಧವನ್ ಶತಕ ದಾಖಲಿಸುತ್ತಿದ್ರೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಅಥವಾ ಹಾರ್ದಿಕ್ ಪಾಂಡ್ಯ ಶತಕ ದಾಖಲಿಸಿದ್ರೂ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ. ಆದ್ರೆ ರಿಷಬ್ ಪಂತ್ ಶತಕ ಎಲ್ಲರನ್ನು ಚಕಿತಗೊಳಿಸುವಂತೆ ಮಾಡಿರೋದಂತೂ ಸುಳ್ಳಲ್ಲ. ಕಾರಣ ರಿಷಬ್ ಪಂತ್ ಈ ಹಿಂದಿನ ಪಂದ್ಯಗಳಲ್ಲಿ ಮಾಡುತ್ತಿದ್ದ ಪ್ರಮಾದಗಳು. ಆದ್ರೆ ಈ ಪಂದ್ಯದಲ್ಲಿ ಅಂತಹ ತಪ್ಪುಗಳನ್ನೇ ಮಾಡಲಿಲ್ಲ. ಬುದ್ಧಿವಂತಿಕೆಯ ಆಟವನ್ನಾಡಿದ್ರು. ಜೊತೆಗೆ ತಾಳ್ಮೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡು ಆಡಿದ್ದರು.

ಅಂದ ಹಾಗೇ ರಿಷಬ್ ಪಂತ್ ಗೆ ಈ ರೀತಿಯಾಗಿಯೇ ಆಡಬೇಕು ಎಂದು ಹೆಡ್ ಕೋಚ್ ರಾಹುಲ್ ದ್ರಾವಿಡ್, ಮಾಜಿ ಕೋಚ್ ರವಿಶಾಸ್ತ್ರಿ, ರಿಕಿ ಪಾಂಟಿಂಗ್ ಸೇರಿದಂತೆ ಟೀಮ್ ಇಂಡಿಯಾದ ಹಿರಿಯ ಆಟಗಾರರು ಸಲಹೆ ನೀಡಿದ್ದರು. ಆದ್ರೆ ಅವುಗಳನ್ನು ರಿಷಬ್ ಪಂತ್ ಗಂಭೀರವಾಗಿ ಪರಿಗಣಿಸಿದ್ರೂ ಅದಕ್ಕೆ ತಕ್ಕಂತೆ ಆಡಿಲ್ಲ.
ಆದ್ರೆ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಿಂತ ಮುನ್ನ ರಿಷಬ್ ಪಂತ್ ಅವರು ಯುವರಾಜ್ ಸಿಂಗ್ ಜೊತೆ ಇ- ಸಂಭಾಷಣೆಯನ್ನು ಮಾಡಿದ್ದರು. ಸುಮಾರು 45 ನಿಮಿಷಗಳ ಸಂಭಾಷಣೆಯಲ್ಲಿ ಯುವರಾಜ್ ಸಿಂಗ್ ಕೆಲವೊಂದು ಸ¯ಹೆ ಮತ್ತು ಮಾರ್ಗದರ್ಶನಗಳನ್ನು ರಿಷಬ್ ಪಂತ್ ಗೆ ನೀಡಿದ್ದರು.
ಅದಕ್ಕೆ ತಕ್ಕಂತೆ ರಿಷಬ್ ಪಂತ್ ಬ್ಯಾಟಿಂಗ್ ಕೂಡ ಮಾಡಿದ್ದರು. ಅಲ್ಲದೆ ಅಜೇಯ 125 ರನ್ ಗಳಿಸಿ ತನ್ನ ಪ್ರತಿಭೆ ಮತ್ತು ಸಾಮಥ್ರ್ಯ ಏನು ಎಂಬುದನ್ನು ವಿಶ್ವ ಕ್ರಿಕೆಟ್ ಗೆ ಪರಿಚಯಿಸಿದ್ರು.
ರಿಷಬ್ ಪಂತ್ ಸೆಂಚುರಿ ಗಳಿಸಿದ್ದ ನಂತರ ಯುವರಾಜ್ ಸಿಂಗ್ ಅವರು ಟ್ವಿಟ್ ಮಾಡಿದ್ದರು.

45 ನಿಮಿಷಗಳ ಇ -ಸಂಭಾಷಣೆ ಅರ್ಥಪೂರ್ಣವಾಗಿತ್ತು ಎಂದು ಟ್ವಿಟ್ ಮಾಡಿದಾಗ ಅದು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
ಇದೀಗ ರಿಷಬ್ ಪಂತ್ ಅವರು ಯುವರಾಜ್ ಸಿಂಗ್ ಅವರ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ನಿಜವಾಗಿದೆ ಯುವಿ ಪಾ ಎಂದು ರಿಷಬ್ ಪಂತ್ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ನಲದಲ್ಲಿ ಹೇಗೆ ಆಡಬೇಕು, ಯಾವ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಏಕಾಗ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ರಿಷಬ್ ಪಂತ್ ಗೆ ಭೋಧನೆ ಮಾಡಿರಬಹುದು.
ಏನೇ ಆಗಲಿ, ರಿಷಬ್ ಪಂತ್ ಅವರ ಕಲಿಯುವ ಗುಣವನ್ನು ಮೆಚ್ಚಲೇಬೇಕು. ಹಿರಿಯ ಆಟಗಾರ ಅನುಭವವನ್ನು ಪಡೆದುಕೊಳ್ಳುವುದು ಎಷ್ಟು ಮಹತ್ವ ಎಂಬುದು ಕೂಡ ಅವರಿಗೆ ಮನವರಿಕೆಯಾಗಿದೆ. ಅದು ಅವರ ಅಜೇಯ ಶತಕದಲ್ಲೂ ಎದ್ದು ಕಾಣುತ್ತಿತ್ತು.