ಐಪಿಎಲ್ 2022 ರ 59 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಕಾದಾಟ ನಡೆಸಿದವು. ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಐಪಿಎಲ್ನ 15ನೇ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 11 ಪಂದ್ಯಗಳಲ್ಲಿ ಕೇವಲ 4 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ಎರಡು ಬದಲಾವಣೆ ಮಾಡಿತು.

ಟ್ರಿಸ್ಟಾನ್ ಸ್ಟಬ್ಸ್ ಪಾದಾರ್ಪಣೆ
ಕೀರಾನ್ ಪೊಲಾರ್ಡ್ ಬದಲಿಗೆ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಮುರುಗನ್ ಅಶ್ವಿನ್ ಬದಲಿಗೆ ಹೃತಿಕ್ ಶೋಕಿನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಯಿತು. ಟ್ರಿಸ್ಟಾನ್ ಸ್ಟಬ್ಸ್ ಇಂದು ಮುಂಬೈ ಇಂಡಿಯನ್ಸ್ಗಾಗಿ ಪದಾರ್ಪಣೆ ಮಾಡಿದರು. ಎಂಐಗೆ ಪದಾರ್ಪಣೆ ಮಾಡಿದ ಮೂರನೇ ಅತಿ ಕಿರಿಯ ವಿದೇಶಿ ಆಟಗಾರ. ಇಂದು ಅವರ ವಯಸ್ಸು 21 ವರ್ಷ 271 ದಿನಗಳಾಗಿದೆ. ಅದೇ ಸಮಯದಲ್ಲಿ, ಡೆವಾಲ್ಡ್ ಬ್ರೆವಿಸ್ ಮುಂಬೈಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ವಿದೇಶಿ ಆಟಗಾರ. ಅವರು 18 ವರ್ಷ 342 ದಿನಗಳಲ್ಲಿ ಮುಂಬೈಗೆ ಪಾದಾರ್ಪಣೆ ಮಾಡಿದರು.
ಮುಂಬೈ ಇಂಡಿಯನ್ಸ್ನ ಅತಿ ಕಿರಿಯ ವಿದೇಶಿ ಆರಂಭಿಕ ಆಟಗಾರರು
ಡೆವಾಲ್ಡ್ ಬ್ರೆವಿಸ್ (SA) 18 ವರ್ಷಗಳು 342 ದಿನಗಳು
ಮಾರ್ಕೊ ಜೆನ್ಸನ್ (SA) 20 ವರ್ಷ 343 ದಿನಗಳು
ಟ್ರಿಸ್ಟಾನ್ ಸ್ಟಬ್ಸ್ (SA) 21 ವರ್ಷ 271 ದಿನಗಳು
ಅಲ್ಜಾರಿ ಜೋಸೆಫ್ (WI) 22 ವರ್ಷ 168 ದಿನಗಳು
ಮುಸ್ತಾಫಿಜುರ್ ರೆಹಮಾನ್ (BAN) 22 ವರ್ಷ 213 ದಿನಗಳು
ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿಗೆ ಪದಾರ್ಪಣೆ ಮಾಡಿದ ಕೀರ್ತಿ ಅಫ್ಘಾನ್ ನ ನೂರ್ ಅಹ್ಮದ್ ಅವರಿಗೆ ಸಲ್ಲುತ್ತದೆ. ಇವರು 17 ವರ್ಷ 40 ದಿನಗಳಿದ್ದಾಗ ಈ ಲೀಗ್ ಗೆ ಪದಾರ್ಪಣೆ ಮಾಡಿದರು.