ಏಕದಿನ ಮತ್ತು ಟಿ20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಹೆಚ್ಚಾಗಿ ಹೋಲಿಸುತ್ತಾರೆ. ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಕೂಡ ಬಾಬರ್ ಅಜಮ್ ಅವರನ್ನು ಹೊಗಳಿದ್ದರು. ಐಸಿಸಿ ವಿಮರ್ಶೆಯಲ್ಲಿ ಮಾತನಾಡಿದ ದಿನೇಶ್, ಬಾಬರ್ ಎಲ್ಲಾ ಮೂರು ಸ್ವರೂಪಗಳಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಬಹುದು ಎಂದು ಹೇಳಿದ್ದಾರೆ.
ಬಾಬರ್ ಅಜಮ್ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್. ಟೆಸ್ಟ್ ಶ್ರೇಯಾಂಕದಲ್ಲಿ ಅವರು ಸದ್ಯ ಐದನೇ ಸ್ಥಾನದಲಿದ್ದಾರೆ. ಅವರು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಸ್‌ಚಾಗ್ನೆ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಮಾಜಿ ಇಂಗ್ಲೆಂಡ್ ನಾಯಕ ಜೋ ರೂಟ್‌ಗಿಂತ ಹಿಂದೆ ಇದ್ದಾರೆ. ಮುಂಬರುವ ದಿನಗಳಲ್ಲಿ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಬೇಕೆಂಬುದು ಬಾಬರ್ ಅಜಮ್ ಅವರ ಕನಸು.
ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್ ಆಗುವುದು ಆಟಗಾರನಾಗಿ ಕನಸು ಎಂದು ಪಾಕಿಸ್ತಾನದ ನಾಯಕ ಹೇಳಿದ್ದಾರೆ. ಇದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ” ಎಂದಿದ್ದಾರೆ.
“ಮೂರೂ ಸ್ವರೂಪದಲ್ಲಿ ನೀವು ನಂಬರ್ 1 ಆಗಬೇಕಾದರೆ, ನೀವು ನಿಮ್ಮನ್ನು ಫಿಟ್ ಆಗಿ ಇರಿಸಿಕೊಳ್ಳಬೇಕು. ಬ್ಯಾಕ್-ಟು-ಬ್ಯಾಕ್ ಕ್ರಿಕೆಟ್ ಪಂದ್ಯಗಳಿದ್ದು, ನಡುವಿನಲ್ಲಿ ವೇಳೆ ಕಡಿಮೆ ಸಿಗುತ್ತದೆ. ಅದಕ್ಕಾಗಿ ನೀವು ಹೆಚ್ಚುವರಿ ಫಿಟ್ ಆಗಿರಬೇಕು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದೇನೆ. ಬಿಳಿ ಚೆಂಡಿನಲ್ಲಿ ಉತ್ತಮವಾಗಿ ಆಡುತತ್ತಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಸ್ಥಿರ ಪ್ರದರ್ಶನ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.