ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2022 ರಲ್ಲಿ ಭಾರತದ ಉದಯೋನ್ಮುಖ ವೇಗದ ಬೌಲರ್ ಉಮ್ರಾನ್ ಮಲಿಕ್ ಮತ್ತು ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದಾರೆ. ಪಂದ್ಯಾವಳಿಯಲ್ಲಿ, ಇಬ್ಬರೂ ಬೌಲರ್‌ಗಳು ಗಂಟೆಗೆ 150 ಕಿಮೀಗಿಂತ ಹೆಚ್ಚಿನ ಎಸೆತಗಳನ್ನು ಬೌಲ್ ಮಾಡಿದ್ದಾರೆ. ಗುಜರಾತ್-ರಾಜಸ್ಥಾನ ನಡುವಿನ ಫೈನಲ್ ಪಂದ್ಯದಲ್ಲಿ ಫರ್ಗುಸನ್ ಗಂಟೆಗೆ 157.3 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಉಮ್ರಾನ್ ದಾಖಲೆಯನ್ನು ಮುರಿದರು.

ಐಪಿಎಲ್‌ನಲ್ಲಿ ಲಾಕಿ ಫರ್ಗುಸನ್ ಮತ್ತು ಉಮ್ರಾನ್ ಮಲಿಕ್ ಅವರ ವೇಗದ ಬೌಲಿಂಗ್ ಬಗ್ಗೆ ಪಾಕ್ ವೇಗಿ ಶಾಹೀನ್ ಆಫ್ರಿದಿರನ್ನು ಕೇಳಿದಾಗ, “ನಿಮಗೆ ಲೈನ್, ಲೆಂಗ್ತ್ ಮತ್ತು ಸ್ವಿಂಗ್ ಇಲ್ಲದಿದ್ದರೆ ವೇಗವು ನಿಮಗೆ ಸಹಾಯ ಮಾಡಲಾರದು ಎಂದಿದ್ದಾರೆ. ODI ಸರಣಿಯ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ. ಈ ಸರಣಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು, ಆದರೆ ಕೊರೊನಾ ಕಾರಣ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನದ ಹಿಂದಿನ ತವರಿನಲ್ಲಿ ನಡೆದ ಸರಣಿಯಲ್ಲಿ ಶಾಹೀನ್ ಆಯ್ಕೆಯಾಗಿದ್ದರು. ಅವರು ತಮ್ಮ ಸ್ವಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದ್ದರು. ವಿಂಡೀಸ್ ವಿರುದ್ಧವೂ ಅವರಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿದೆ.
ಬೇಸಿಗೆಯಲ್ಲಿ ದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡುವುದು ವೇಗದ ಬೌಲರ್‌ಗಳಿಗೆ ಕಠಿಣ ಸವಾಲಾಗಿದೆ ಆದರೆ ವೃತ್ತಿಪರರಾಗಿ ನಾವು ಅದನ್ನು ಎದುರಿಸಲು ಸಿದ್ಧರಿದ್ದೇವೆ. ನಿಕೋಲಸ್ ಪೂರನ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವನ್ನು ಬಲಿಷ್ಠ ತಂಡವೆಂದು ಕರೆದಿರುವ ಶಾಹೀನ್ ಅವರು ಈ ಸರಣಿಯನ್ನು ಗೆಲ್ಲಲು ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಮುಖ ಅಂಕಗಳನ್ನು ಗಳಿಸಲು ಬಯಸುತ್ತೇವೆ ಎಂದು ಹೇಳಿದರು.
ವಿಶ್ವಕಪ್ ಅರ್ಹತೆಯ ದೃಷ್ಟಿಯಿಂದ ಇದೊಂದು ಮಹತ್ವದ ಸರಣಿಯಾಗಿದ್ದು, ಯಾವುದೇ ಪಂದ್ಯವನ್ನು ಸೋಲಲು ನಾವು ಬಯಸುವುದಿಲ್ಲ ಎಂದು ಶಾಹೀನ್ ಶಾ ಆಫ್ರಿದಿ ಹೇಳಿದ್ದಾರೆ.