IPL 2022- ಆರ್ ಸಿಬಿ ನಾಯಕತ್ವಕ್ಕೆ ಇಷ್ಟೊಂದು ಬಿಲ್ಡಪ್ ಬೇಕಾ ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ವಿಚಾರದಲ್ಲಿ ಆರ್ ಸಿಬಿ ಹೈಕಮಾಂಡ್ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈಗಾಗಲೇ ಮಾರ್ಚ್ 12ರಂದು ತಂಡದ ನಾಯಕ ಯಾರು ಎಂಬುದನ್ನು ಘೋಷಣೆ ಮಾಡುವುದಾಗಿ ಆರ್ ಸಿಬಿ ಮ್ಯಾನೇಜ್ ಮೆಂಟ್ ಸ್ಪಷ್ಟಪಡಿಸಿದೆ.
ಈಗಾಗಲೇ ಐಪಿಎಲ್ ನ 9 ತಂಡಗಳ ನಾಯಕರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಿವೆ. ಕೆಕೆಆರ್ ತಂಡವನ್ನು ಹೊರತುಪಡಿಸಿ ಇನ್ನುಳಿದ ಎಂಟು ಫ್ರಾಂಚೈಸಿಗಳು ಐಪಿಎಲ್ ಹರಾಜಿಗೆ ಮುನ್ನವೇ ನಾಯಕರನ್ನು ಆಯ್ಕೆ ಮಾಡಿದೆ. ಆದ್ರೆ ಕೆಕೆಆರ್ ತಂಡ ಐಪಿಎಲ್ ಹರಾಜಿನ ಬಳಿಕ ನಾಯಕನನ್ನು ಆಯ್ಕೆ ಮಾಡಿಕೊಂಡಿತ್ತು.
ಆದ್ರೂ ಇಲ್ಲಿಯವರೆಗೆ ಆರ್ ಸಿಬಿ ನಾಯಕ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುವುದು ದೂರದ ಮಾತು. ಇನ್ನು ಫಾಫ್ ಡುಪ್ಲೇಸಸ್, ಗ್ಲೇನ್ ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಹಾಗೇ ತಂಡದಲ್ಲಿರುವ ಯುವ ಆಟಗಾರನಿಗೆ ನಾಯಕತ್ವ ನೀಡಿ ಅಚ್ಚರಿಗೊಳಿಸುವ ಸಾಧ್ಯತೆಯೂ ಇದೆ.
ಅದೇನೇ ಇರಲಿ, ಆರ್ ಸಿಬಿ ಹೈಕಮಾಂಡ್ ನಾಯಕನ ವಿಚಾರದಲ್ಲಿ ಯಾಕೆ ಇಷ್ಟೊಂದು ಬಿಲ್ಡಪ್ ತೆಗೆದುಕೊಳ್ಳುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನೊಂದೆಡೆ ವಿರಾಟ್ ಕೊಹ್ಲಿಯವರನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಿದೆಯಾ ಅನ್ನೋ ಸಂಶಯ ಕೂಡ ಇದೆ. ಹಾಗೇ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಡುಪ್ಲೇಸಸ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಅನ್ನೋ ಗೊಂದಲ ಕೂಡ ಇದೆ.

ಈ ನಡುವೆ, ಆರ್ ಸಿಬಿ ನಾಯಕತ್ವ ಅಂದ್ರೆ ತಂಡದ ಬ್ರಾಂಡ್ ಅಂಬಾಸಿಡರ್ ಕೂಡ ಹೌದು. ಇದರಲ್ಲಿ ಆರ್ ಸಿಬಿಯ ಮಾರುಕಟ್ಟೆ ವಿಸ್ತರಣೆಗೊಳ್ಳುವ ಪ್ಲಾನ್ ಕೂಡ ಇದೆ. ಒಂದು ವೇಳೆ ಈ ಲೆಕ್ಕಾಚಾರವನ್ನು ಹಾಕಿಕೊಂಡ್ರೆ ಗ್ಲೇನ್ ಮ್ಯಾಕ್ಸ್ ವೆಲ್ ಗೆ ನಾಯಕನಾಗುವುದು ಪಕ್ಕ. ಅದೇ ರೀತಿ ಐಪಿಎಲ್ ಆರಂಭವಾಗುವಾಗ ಗ್ಲೇನ್ ಮ್ಯಾಕ್ಸ್ ವೆಲ್ ಮದುವೆಯ ಬಿಝಿಯಲ್ಲಿರುತ್ತಾರೆ. ಇದೊಂದು ಹಿನ್ನಡೆ ಬಿಟ್ರೆ ಮ್ಯಾಕ್ಸ್ ವೆಲ್ ಗೆ ನಾಯಕನಾಗುವುದಕ್ಕೆ ಯಾವುದೇ ತೊಂದರೆ ಇಲ್ಲ. IPL 2022- Royal Challengers Bangalore set to announce new captain
ಈ ನಡುವೆ ಮುಂದಿನ ಟಿ-20 ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರನನ್ನು ನಾಯಕನ್ನಾಗಿ ಮಾಡಿದ್ರೆ ತಂಡದ ಪ್ರಚಾರ ಮತ್ತು ಜನಪ್ರಿಯತೆಯೂ ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣಗಳನ್ನಿಟ್ಟುಕೊಂಡು ಆರ್ ಸಿಬಿ ನಾಯಕನ ಘೋಷಣೆಯನ್ನು ಬಹಳ ಸಿಕ್ರೇಟ್ ಆಗಿ ಇಟ್ಟುಕೊಂಡು ಅದ್ದೂರಿಯಾಗಿ ಘೋಷಣೆ ಮಾಡುವ ಪ್ಲಾನ್ ನಲ್ಲಿದೆ.