ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಭರ್ಜರಿ ಆರಂಭ ದೊರೆತಿದೆ. ಕೊನೆ ಕ್ಷಣದವರೆಗೂ ಪೈಪೋಟಿಯಿಂದ ಕೂಡಿದ್ದ ಟೂರ್ನಿಯ ಮೊದಲ ಪಂದ್ಯದಲ್ಲಿ ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 3 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಮೌಂಟ್ಮೌಂಗನ್ಯುಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ವನಿತೆಯರು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಕಿವೀಸ್, 49.5 ಓವರ್ಗಳಲ್ಲಿ 456 ರನ್ಗಳಿಸಿ ಆಲೌಟ್ ಆಯಿತು.
ಕೆರೆಬಿಯನ್ನರು ನೀಡಿದ ಟಾರ್ಗೆಟ್ ಬೆನ್ನತ್ತಿದ ನ್ಯೂಜಿ಼ಲೆಂಡ್ ಪರ ನಾಯಕಿ ಶೊಫೈನ್ ಡಿವೈನ್(108) ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಕಣಕ್ಕಿಳಿದ ಮಾರ್ಟಿನ್(44) ಹಾಗೂ ಜೆಸ್ ಕೇರ್(25) ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನ್ಯೂಜಿ಼ಲೆಂಡ್ ಕೊನೆಯ ಓವರ್ನಲ್ಲಿ ಕೇವಲ 2 ರನ್ಗಳಿಸಿ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ಆಘಾತ ಎದುರಿಸಿತು. ವಿಂಡೀಸ್ ಪರ ಸಾಂಘಿಕ ಬೌಲಿಂಗ್ ಪ್ರದರ್ಶಿಸಿದ ಮ್ಯಾಥ್ಯೂವ್ಸ್, ಅನಿಸಾ ಮೊಹಮ್ಮದ್ ಹಾಗೂ ಡೊಟಿನ್ ತಲಾ 2 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೇಯ್ಲಿ ಮ್ಯಾಥ್ಯೂವ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಸಾಂಘಿಕ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾಗಿ ಕಣಕ್ಕಿಳಿದ ಡಿಯಾಂಡ್ರಾ ಡೊಟಿನ್(12) ಹಾಗೂ ಮೊದಲ ಕ್ರಮಾಂಕದಲ್ಲಿ ಬಂದ ಕ್ನೈನ್ಟ್(5) ಬಹುಬೇಗನೆ ನಿರ್ಗಮಿಸಿದರು. ಆದರೆ ನಂತರ ಜೊತೆಯಾದ ಆರಂಭಿಕ ಬ್ಯಾಟರ್ ಹೇಯ್ಲಿ ಮ್ಯಾಥ್ಯೂವ್ಸ್(119) ಹಾಗೂ ಸ್ಟಫ್ನೈನ್ ಟೇಲರ್(30) ಜವಾಬ್ದಾರಿಯುತ ಆಟವಾಡಿದರು. ಅದ್ಭುತ ಬ್ಯಾಟಿಂಗ್ ಮೂಲಕ ಕಿವೀಸ್ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಮ್ಯಾಥ್ಯೂವ್ಸ್, ಅಮೋಘ ಶತಕ ಬಾರಿಸಿ ಅಬ್ಬರಿಸಿದರು. ಇವರಿಗೆ ಸಾಥ್ ನೀಡಿದ ಶೆಮೈನೆ ಕ್ಯಾಂಪೆಬಲ್(20) ಹಾಗೂ ಚೆದಿಯನ್ ನೇಷನ್(36) ಉತ್ತಮ ಆಟವಾಡುವ ಮೂಲಕ ತಂಡದ ಮೊತ್ತವನ್ನು 250ರ ಗಡಿದಾಟಿಸಿದರು. ಕಿವೀಸ್ ಪರ ಲೇಹ್ ತಹುಹು 3, ಜೆಸ್ ಕೇರ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.