ವಿಶ್ವ ಟೆಸ್ಟ್ ಫೈನಲ್ಗೆ ಅರ್ಹತೆ ಪಡೆದಿರುವ ಟೀಮ್ ಇಂಡಿಯಾ ಮಹಾ ಕದನಕ್ಕೆ ಸಿದ್ಧತೆ ಆರಂಭಿಸಿದೆ. ವಿಶ್ವ ಟೆಸ್ಟ್ ಫೈನಲ್ ಒವೆಲ್ನಲ್ಲಿ ಜೂ,7ರಿಂದ ಜೂ.11ರವೆಗೆ ನಡೆಯಲಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಅಹಮದಾಬಾದ್ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡರೂ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿದ್ದರಿಂದ ಟೀಮ್ ಇಂಡಿಯಾ ವಿಶ್ವ ಟೆಸ್ಟ್ಗೆ ನೇರ ಅರ್ಹತೆ ಪಡೆಯಿತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಸಜ್ಜಾಗಲು ಇದೀಗ ಟೀಮ್ ಇಂಡಿಯಾ ತಂಡದ ಕೆಲ ಆಟಗಾರನ್ನು ಬೇಗನೆ ಆಂಗ್ಲರ ನಾಡಿಗೆ ಕಳುಹಿಸಲು ನಿರ್ಧರಿಸಿದೆ. ಜತೆಗೆ ವೇಗಿಗಳಿಗೆ ಡ್ಯೂಕ್ ಬಾಲ್ಗಳಲ್ಲಿ ಅಭ್ಯಾಸ ಮಾಡಲು ಸೂಚಿಸಿದೆ.
ಭಾರತ ತವರಿನಲ್ಲಿ ಎಸ್ಜಿ ಟೆಸ್ಟ್ ಚೆಂಡಿನ ಆಡ್ತುತಾ ಬಂದಿದೆ. ಇಂಗ್ಲೆಂಡ್ನಲ್ಲಿ ಡ್ಯೂಕ್ ಚೆಂಡಿನಲ್ಲಿ ಆಡಲಾಗುತ್ತದೆ.
ಐಪಿಎಲ್ ಮುಗಿದ ಕೂಡಲೇ ವಿಶ್ವ ಟೆಸ್ಟ್ ಫೈನಲ್
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಂತರ ಭಾರತೀಯ ಆಟಗಾರರು ಐಪಿಎಲ್ ಆಡಲಿದ್ದಾರೆ. ಮಾ.31 ರಿಂದ ಆರಂಭವಾಗಲಿರುವ ಫ್ರಾಂಚೈಸಿ ಲೀಗ್ ಎರಡು ತಿಂಗಳ ಕಾಲ ನಡೆಯಲಿದೆ. ಐಪಿಎಲ್ ಟೂರ್ನಿ ಮುಗಿದ 9 ದಿನಕ್ಕೆ ವಿಶ್ವ ಟೆಸ್ಟ್ ಫೈನಲ್ ಆರಂಭವಾಗಲಿದೆ.
ಐಪಿಎಲ್ ಮುಗಿಸಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬ ಕಠಿಣವಾಗಿದೆ. ನಾವು ಆಟಗಾರರ ಜತೆ ಸಂಪರ್ಕದಲ್ಲಿರುತ್ತೇವೆ. ವರ್ಕ್ಲೋಡ್ ಅನ್ನು ಗಮನಿಸುತ್ತೇವೆ. ಆಟಗಾರರನ್ನು ಇಂಗ್ಲೆಂಡ್ ಕಳಿಸುವಾಗ ಡ್ಯೂಕ್ ಬಾಲ್ಗಳನ್ನು ಕೊಟ್ಟು ಅಭ್ಯಾಸ ಮಾಡಲು ಹೇಳುತ್ತೇವೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಇಂಗ್ಲೆಂಡ್ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರು ಕಡಿಮೆ ಸಮಯದಲ್ಲಿ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುತ್ತಾರೆ. ಒಂದೋ ಎರಡೋ ಆಟಗಾರರು ಬಿಟ್ಟರೆ ಉಳಿದ ಆಟಗಾರರು ಆಡಿದ ಅನುಭವ ಹೊಂದಿದ್ದಾರೆ. ವಿಶ್ವ ಟೆಸ್ಟ್ ಫೈನಲ್ಗೆ ಆಡುವ ಆಟಗಾರರನ್ನು ಆಡಳಿತ ಮಂಡಳಿ ಗಮನಿಸಲಿದೆ. ಅದರಂತೆ ಯೋಜನೆ ರೂಪಿಸಲಿದೆ ಎಂದು ಟೀಮ್ ಇಂಡಿಯಾ ನಾಯಕ ಮಾಹಿತಿ ನೀಡಿದ್ದಾರೆ.
ನಾನು ತಯಾರಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ಫೈನಲ್ಗೆ ಇದು ಪ್ರಮುಖವಾಗಿದೆ. ಮೇ21ರವೇಳೆಗೆ ಐಪಿಎಲ್ನ 6 ತಂಡಗಳು ಹೊರಬೀಳಲಿವೆ. ಯಾವೆಲ್ಲಾ ಆಟಗಾರರು ಲಭ್ಯರಿದ್ದಾರೋ ಆ ಆಟಗಾರರನ್ನು ಸಾಧ್ಯವಾದಷ್ಟು ಬೇಗ ಕಳಿಸುತ್ತೇವೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ವೇಳಾಪಟ್ಟಿ ಮತ್ತು ಏಕದಿನ ವಿಶ್ವಕಪ್ ತಯಾರಿ ದೃಷ್ಟಿಯಲ್ಲಿಟ್ಟುಕೊಂಡು ಎನ್ಸಿಎ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಪ್ರಮುಖ ಆಟಗಾರರ ಮೇಲೆ ನಿಗಾ ಇಡಲಿದೆ ಎಂದು ಬಿಸಿಸಿಐ ಹೇಳಿತ್ತು.