ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭಾ ಮಾಡಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್.ಪ್ರಣಯ್ ಎದುರಾಳಿ ತೈಪೈನ ಟ್ಜು ವ್ಹೀ ವಿರುದ್ಧ 49 ನಿಮಿಷಗಳ ಕಾಲ ಹೋರಾಡಿ 21-19, 22-20 ಅಂಕಗಳಿಂದ ಮಣಿಸಿದರು.
ಎರಡನೆ ಸುತ್ತಿನಲ್ಲಿ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಅಥವಾ ಥಾಯ್ಲೆಂಡ್ನ ಕಾಂಟೊನ್ ವಾಂಗ್ಚಾರೊಎನ್ ವಿರುದ್ಧ ಆಡಲಿದ್ದಾರೆ.
ಮೊದಲ ಸುತ್ತಿನಲ್ಲಿ ಪ್ರಣಯ್ 11-4 ಮುನ್ನಡೆ ಪಡೆದರು. ನಂತರ 18-12 ಅಂಕಗಳಾಗಿ ಪ್ರಣಯ್ ಪರಿವರ್ತಿಸಿದರು.
ಪ್ರಣಯ್ ಸ್ಮ್ಯಾಶ್ಗಳು ಪರಿಣಾಮಕಾರಿಯಾಗದ ಕಾರಣ ಟ್ಜು ವ್ಹೀ ವಾಂಗ್ ಅಂಕ ಹೆಚ್ಚಿಸಿಕೊಂಡರು. ವಾಂಗ್ 191-19 ಅಂಕಗಳನ್ನು ಸಮ ಮಾಡಿಕೊಂಡರು. ಎಚ್ಚೆತ್ತ ಪ್ರಣಯ್ ಸ್ಮ್ಯಾಶ್ಗಳ ಸಹಾಯದಿಂದ ಮೊದಲ ಸುತ್ತು ಗೆದ್ದರು.
ಎರಡನೆ ಸುತ್ತಿನಲ್ಲಿ ವಾಂಗ್ 7-2 ಮುನ್ನಡೆ ಪಡೆದರು. ಮರು ಹೋರಾಟ ನೀಡಿದ ಪ್ರಣಯ್ 16-16,19-19 ಅಂಕಗಳನ್ನು ಸಮಗೊಳಿಸಿದರು. ಕೊನೆಯಲ್ಲಿ ವಾಂಗ್ ನೆಟ್ಗೆ ಹೊಡೆಯುವ ಮೂಲಕ ಪಂದ್ಯ ಕೈಚೆಲ್ಲಿದರು.