ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ ಸ್ಟೀವ್ ಸ್ಮಿತ್, ಆ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ.
ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಅಜೇಯ 95 ರನ್‌ಗಳಿಸಿದ್ದ ಸ್ಟೀವ್ ಸ್ಮಿತ್, 2ನೇ ದಿನವೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಬದುಕಿನ 31ನೇ ಶತಕ ದಾಖಲಿಸಿದ ಆಸೀಸ್ ಮಾಜಿ ಕ್ಯಾಪ್ಟನ್ ಅಂತಿಮವಾಗಿ 121 ರನ್‌ಗಳಿಸಿ ಶಾರ್ದೂಲ್ ಥಾಕೂರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.
ತಮ್ಮ ಈ ಅತ್ಯುತ್ತಮ ಶತಕದ ಮೂಲಕ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಹೆಚ್ಚು ಸೆಂಚೂರಿ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಭಾರತದ ಪರ ಸ್ಟೀವ್ ಸ್ಮಿತ್ ದಾಖಲಿಸಿದ 9ನೇ ಟೆಸ್ಟ್ ಶತಕ ಇದಾಗಿದ್ದು, ಇದಕ್ಕೂ ಮುನ್ನ ಜೋ ರೂಟ್ ಈ ಸಾಧನೆ ಮಾಡಿದ್ದರು. ಸ್ಮಿತ್ ಹಾಗೂ ರೂಟ್ ಹೊರತುಪಡಿಸಿ ರಿಕಿ ಪಾಂಟಿಂಗ್, ಸರ್ ವಿವಿ ರಿಚರ್ಡ್ಸ್ ಹಾಗೂ ಸರ್ ಗ್ರೆಫಿಲ್ಡ್ ಸೋಬರ್ಸ್ ಅವರುಗಳು ಭಾರತದ ವಿರುದ್ಧ 8 ಶತಕಗಳನ್ನ ಬಾರಿಸಿದ್ದಾರೆ.
ಇನ್ನೂ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಹೆಚ್ಚು ಟೆಸ್ಟ್ ಶತಕ ದಾಖಲಿಸಿರುವ ಬ್ಯಾಟ್ಸ್‌ಮನ್‌ಗಳ ಲಿಸ್ಟ್‌ನಲ್ಲೂ ಸ್ಟೀವ್ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ. ಉಭಯ ತಂಡಗಳ ನಡುವೆ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಸಚಿನ್ ತೆಂಡುಲ್ಕರ್ 11 ಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ. 9 ಶತಕ ದಾಖಲಿಸಿರುವ ಸ್ಮಿತ್, 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುನೀಲ್ ಗವಾಸ್ಕರ್, ರಿಕಿ ಪಾಂಟಿಂಗ್ ಹಾಗೂ ವಿರಾಟ್ ಕೊಹ್ಲಿ ತಲಾ 8 ಶತಕ ದಾಖಲಿಸಿದ್ದರೆ. ಮೈಕಲ್ ಕ್ಲಾರ್ಕ್ 7 ಟೆಸ್ಟ್ ಶತಕ ಬಾರಿಸಿದ್ದಾರೆ.
WTC Final, Team India, Australia, Steve Smith, Most Test Hundreds, Sports Karnataka