ಟ್ರಾವಿಸ್ ಹೆಡ್(163) ಹಾಗೂ ಸ್ಟೀವ್ ಸ್ಮಿತ್(121) ಅವರ ಅಮೋಘ ಶತಕದ ನೆರವಿನಿಂದ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 469 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ 2ನೇ ದಿನವಾದ ಇಂದು 327/3 ರನ್ಗಳಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 121.3 ಓವರ್ಗಳಲ್ಲಿ 469 ರನ್ಗಳಿಸಿತು. ಆಸೀಸ್ ಪರ ಟ್ರಾವಿಸ್ ಹೆಡ್(163) ಹಾಗೂ ಸ್ಟೀವ್ ಸ್ಮಿತ್(121), ಅಲೆಕ್ಸ್ ಕ್ಯಾರಿ(48) ಹಾಗೂ ಡೇವಿಡ್ ವಾರ್ನರ್(43) ರನ್ಗಳಿಸಿದರು. ಟೀಂ ಇಂಡಿಯಾ ಪರ ಸಿರಾಜ್(4/108) ವಿಕೆಟ್ ಪಡೆದು ಮಿಂಚಿದರೆ. ಶಮಿ ಹಾಗೂ ಶಾರ್ದೂಲ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ 327/3 ರನ್ಗಳಿಂದ ದಿನದಾಟ ಆರಂಭಿಸಿದ ಆಸೀಸ್ ತಂಡಕ್ಕೆ ಸ್ಟೀವ್ ಸ್ಮಿತ್(121) ಹಾಗೂ ಟ್ರಾವಿಸ್ ಹೆಡ್(163) ಮತ್ತೊಮ್ಮೆ ಆಸರೆಯಾದರು. ಮೊದಲ ದಿನದಂತ್ಯಕ್ಕೆ ಕಲೆಹಾಕಿದ್ದ 146 ರನ್ಗಳಿಂದ ಇನ್ನಿಂಗ್ಸ್ ಆರಂಭಿಸಿದ ಹೆಡ್, ಅಂತಿಮವಾಗಿ 163 ರನ್ಗಳಿಸಿ ಔಟಾದರೆ. 95 ರನ್ಗಳಿಸಿ ಶತಕದ ಹೊಸ್ತಿಲಲ್ಲಿದ್ದ ಸ್ಮಿತ್, ದಿನದಾಟ ಆರಂಭದಲ್ಲೇ ಶತಕದ ಸಂಭ್ರಮ ಆಚರಿಸಿ, 121 ರನ್ಗಳಿಗೆ ತಮ್ಮ ಆಟ ಮುಗಿಸಿದರು. ಭಾರತದ ಬೌಲರ್ಗಳ ಬೆವರಿಳಿಸಿದ ಈ ಜೋಡಿ 4ನೇ ವಿಕೆಟ್ಗೆ 285 ರನ್ಗಳ ಬೃಹತ್ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಇವರಿಬ್ಬರ ನಂತರದಲ್ಲಿ ಬಂದ ಅಲೆಕ್ಸ್ ಕ್ಯಾರಿ(48) ಉಪಯುಕ್ತ ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಉಳಿದಂತೆ ಕೆಮರೂನ್ ಗ್ರೀನ್(6), ಮಿಚೆಲ್ ಸ್ಟಾರ್ಕ್(5), ನಾಯಕ ಪ್ಯಾಟ್ ಕಮ್ಮಿನ್ಸ್(9), ನೇಥನ್ ಲಯನ್(9) ಹಾಗೂ ಸ್ಕಾಟ್ ಬೊಲೆಂಡ್(1*) ನಿರೀಕ್ಷಿತ ಆಟವಾಡುವಲ್ಲಿ ಎಡವಿದರು.
WTC Final, Team India, Australia, Steve Smith, Most Test Hundreds, Sports Karnataka