ಟೀಮ್ ಇಂಡಿಯಾದಿಂದ ಹೊರ ಬಿದ್ದಿರುವ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಈಗ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ವೃದ್ಧಿಮಾನ್ ಜೊತೆ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ್ದ ವಿಷಯ ಹೊರಬಿದ್ದಿತ್ತು. ಸಾಹಾ ಮಾಡಿದ ಎಡವಟ್ಟು ಕೋಚ್ ದ್ರಾವಿಡ್ ಇಮೇಜ್ಗೆ ಧಕ್ಕೆ ತಂದಿತ್ತು. ಅದಾಗಿ ವಾರ ಕೂಡ ಕಳೆದಿಲ್ಲ. ಖ್ಯಾತ ಪತ್ರಕರ್ತನೊಬ್ಬ ವೃದ್ಧಿಮಾನ್ಗೆ ಬೆದರಿಕೆ ಒಡ್ಡಿದ್ದಾರೆ ಅನ್ನುವ ಆರೋಪವಿದೆ.
ಏನಿದು ಘಟನೆ..?
ವೃದ್ಧಿಮಾನ್ ಸಾಹಾ ಮತ್ತು ಹೆಡ್ ಕೋಚ್ ವಿವಾದದ ಬಳಿಕ ಪತ್ರಕರ್ತರೊಬ್ಬರು ವೃದ್ಧಿಮಾನ್ ಸಂದರ್ಶನಕ್ಕಾಗಿ ಕರೆ ಮಾಡಿದ್ದಾರೆ. ಆದರೆ ಸಹಾ ಅದನ್ನು ರಿಸೀವ್ ಮಾಡಿರಲಿಲ್ಲ. ಅದಾದ ಬಳಿಕ ಪತ್ರಕರ್ತ ವಾಟ್ಸ್ ಆ್ಯಪ್ ಮೆಸೇಜ್ ಮಾಡಿದ್ದಾರೆ. ಅದಕ್ಕೂ ಸಾಹಾ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಬಳಿಕ ಪತ್ರಕರ್ತ, ಸಾಹಾಗೆ ವಾಟ್ಸ್ ಆ್ಯಪ್ ಮೂಲಕ, “You did not call. Never again will I interview you. I don’t take insults kindly. And I will remember this. This wasn’t something ypu should have done.” ಅನ್ನುವ ಸಂದೇಶ ಕಳುಹಿಸಿದ್ದಾರೆ.
ಈ ಮೇಸೇಜ್ ಅನ್ನು ಸಾಹಾ ಟ್ವೀಟ್ ಮಾಡಿ, 40 ಟೆಸ್ಟ್ ಆಡಿದ ಬಳಿಕ So Called “Respected” Journalist ಅಂತ ಬರೆದುಕೊಂಡು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಖಾಡಕ್ಕಿಳಿದ ದಿಗ್ಗಜರು..!
ಸಾಹಾ ಟ್ವೀಟ್ ಮಾಡುತ್ತಲೇ ರವಿಶಾಸ್ತ್ರಿ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಕ್ರಿಕೆಟಿಗರು ಅಖಾಡಕ್ಕೆ ಇಳಿದಿದ್ದಾರೆ. ಪತ್ರಕರ್ತನ ಹೆಸರು ಬಹಿರಂಗ ಮಾಡಲು ಸೂಚಿಸಿದ್ದಾರೆ. ಮತ್ತೊಂದು ಕಡೆಯಲ್ಲಿ ಬಿಸಿಸಿಐ ಬೆದರಿಕೆ ಬಗ್ಗೆ ಸಾಹಾ ಬಳಿ ವಿವರಣೆ ಕೇಳಿದೆ.
ಟೆಸ್ಟ್ ಕೆರಿಯರ್ ಅಂತ್ಯದಲ್ಲಿ ಸಾಹಾ ಬೇಕಿಲ್ಲದ ವಿವಾದಕ್ಕೆ ಸಿಲುಕುತ್ತಿದ್ದಾರೆ. ಸಾಹಾ ವೃತ್ತಿ ಜೀವನ ವೃದ್ಧಿಯಾದಗಲೂ ಸುಮ್ಮನಿದ್ದ ಕ್ರಿಕೆಟರ್ ಈಗೇಕೆ ಹೀಗೆ ಮಾಡ್ತಿದ್ದಾರೆ ಅನ್ನುವುದು ಚರ್ಚೆಗೆ ಕಾರಣವಾಗಿದೆ.