Team india – ಮಾತು ತಪ್ಪಿದ ದಾದಾ..! ವಿದಾಯ ಹೇಳುವಂತೆ ವೃದ್ದಿಮಾನ್ ಗೆ ದ್ರಾವಿಡ್ ಹೇಳಿದ್ಯಾಕೆ ?
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ವೃದ್ಧಿಮಾನ್ ಸಾಹ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ನವೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾನು ಅಜೇಯ 61 ರನ್ ದಾಖಲಿಸಿದ್ದೆ. ಆ ಸಮಯದಲ್ಲಿ ಸೌರವ್ ಗಂಗೂಲಿ ಅವರು ವಾಟ್ಸಪ್ ನಲ್ಲಿ ನನಗೆ ಸಂದೇಶ ಕಳಿಸಿ ಅಭಿನಂದಿಸಿದ್ದರು. ಅಲ್ಲದೆ ನಾನು ಬಿಸಿಸಿಐ ಅಧ್ಯಕ್ಷನಾಗಿರುವ ತನಕ ಯಾವುದರ ಬಗ್ಗೆಯೂ ಚಿಂತೆ ಮಾಡಬೇಡ ಎಂದು ಹೇಳಿದ್ದರು. ಸೌರವ್ ಗಂಗೂಲಿ ಅವರ ಈ ಸಂದೇಶದಿಂದ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೆ. ಆದ್ರೆ ಈಗ ಎಲ್ಲವೂ ಬದಲಾವಣೆಯಾಗಿಬಿಟ್ಟಿದೆ. ಇದಕ್ಕೆ ಕಾರಣ ಏನು ಎಂಬುದೇ ಗೊತ್ತಾಗುತ್ತಿಲ್ಲ ಎಂದು ವೃದ್ದಿಮಾನ್ ಸಾಹಾ ಹೇಳಿದ್ದಾರೆ.
ಟೀಮ್ ಇಂಡಿಯಾದ ತಂಡದಲ್ಲಿ ತನ್ನ ಸ್ಥಾನದ ಬಗ್ಗೆ ಚಿಂತೆ ಮಾಡಬೇಡ ಎಂದಿದ್ದ ಗಂಗೂಲಿ ಈಗ ವೃದ್ದಿಮಾನ್ ಸಾಹಾ ಅವರಿಗೆ ಕೈಕೊಟ್ಟಿದ್ದಾರೆ. ಮುಂದಿನ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಿಂದಲೂ ವೃದ್ದಿಮಾನ್ ಸಾಹಾ ಅವರನ್ನು ಕೈಬಿಡಲಾಗಿದೆ. ಆದ್ರೆ ಶ್ರೀಲಂಕಾ ಸರಣಿಗೆ ತಾನು ಆಯ್ಕೆಯಾಗುವುದಿಲ್ಲ ಎಂಬುದು ಕೂಡ ವೃದ್ದಿ ಮಾನ್ ಸಾಹಾಗೆ ಮೊದಲೇ ಗೊತ್ತಿತ್ತು. ಹೀಗಾಗಿಯೇ ಅವರು ರಣಜಿ ಟೂರ್ನಿಯಿಂದಲೂ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ತಾನು ಟೀಮ್ ಇಂಡಿಯಾದಲ್ಲಿ ಆಡುವುದಿಲ್ಲ ಎಂಬುದರ ಬಗ್ಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ವೃದ್ದಿಮಾನ್ ಗೆ ಸುಳಿವು ಕೊಟ್ಟಿದ್ದರು. ಇದೀಗ ರಾಹುಲ್ ದ್ರಾವಿಡ್ ಹೇಳಿರುವ ವಿಚಾರವನ್ನು ಕೂಡ ವೃದ್ದಿಮಾನ್ ಬಹಿರಂಗಪಡಿಸಿದ್ದಾರೆ.
ತಂಡದ ಭಾಗವಾಗಿರುವ ತನಕ ಈ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಿರಲಿಲ್ಲ. ಅದು ನಿಯಮಕ್ಕೆ ವಿರುದ್ಧವಾಗಿರುತ್ತದೆ. ಆದ್ರೆ ಟೆಸ್ಟ್ ತಂಡದಲ್ಲಿ ನನಗೆ ಸ್ಥಾನ ಸಿಗುವುದಿಲ್ಲ ಎಂಬುದು ಮೊದಲೇ ಗೊತ್ತಿತ್ತು. ಈ ಹಿಂದೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ನಿವೃತ್ತಿಯ ಬಗ್ಗೆ ಯೋಚನೆ ಮಾಡುವಂತೆ ಹೇಳಿದ್ದರು ಎಂದು ವೃದ್ದಿಮಾನ್ ಸಾಹಾ ಹೇಳಿದ್ದಾರೆ. Wriddhiman Saha also hit out at BCCI president Sourav Ganguly
ಇನ್ನೊಂದೆಡೆ ಟೀಮ್ ಮ್ಯಾನೇಜ್ ಮೆಂಟ್ ಕೂಡ ವೃದ್ದಿ ಮಾನ್ ಸಾಹಾ ಅವರನ್ನು ಮುಂದಿನ ದಿನಗಳಲ್ಲಿ ಆಯ್ಕೆಗೆ ಪರಿಗಣಿಸುವುದಿಲ್ಲ ಎಂದು ಹೇಳಿತ್ತು. ಬಹುಶಃ ಇದೇ ಕಾರಣದಿಂದ ವೃದ್ದಿಮಾನ್ ಸಾಹಾ ಅವರು ರಣಜಿ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿರಬೇಕು.
ಒಟ್ಟಿನಲ್ಲಿ ಧೋನಿ ಮತ್ತು ರಿಷಬ್ ಪಂತ್ ಪ್ರಭಾವಳಿಯಿಂದಾಗಿ ವೃದ್ದಿಮಾನ್ ಸಾಹಾ ಅವರ ಕ್ರಿಕೆಟ್ ಬದುಕು ಕೂಡ ತೆರೆಮರೆಗೆ ಸರಿಯುವಂತವಾಯ್ತು.
ಸದ್ಯ ಟೀಮ್ ಇಂಡಿಯಾದಲ್ಲಿ ಸಾಕಷ್ಟು ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳಿದ್ದಾರೆ. ರಿಷಬ್ ಪಂತ್, ಇಶಾನ್ ಕಿಶಾನ್, ಸಂಜು ಸ್ಯಾಮ್ಸನ್, ಕೆ. ಭರತ್ ಸೇರಿದಂತೆ ಕೆ.ಎಲ್. ರಾಹುಲ್ ಕೂಡ ವಿಕೆಟ್ ಕೀಪಿಂಗ್ ಮಾಡುತ್ತಾರೆ. ಹೀಗಾಗಿ 37ರ ಹರೆಯದ ವೃದ್ದಿಮಾನ್ ಸಾಹಾ ಅನಿವಾರ್ಯವಾಗಿ ವಿದಾಯ ಹೇಳಲೇಬೇಕು.