Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

WPL ಆರ್ಸಿಬಿಯ ಪ್ಲೇ ಆಫ್ ಕನಸು ಭಗ್ನ

WPL ಆರ್ಸಿಬಿಯ ಪ್ಲೇ ಆಫ್ ಕನಸು ಭಗ್ನ

March 21, 2023
in Cricket, ಕ್ರಿಕೆಟ್
WPL ಆರ್ಸಿಬಿಯ ಪ್ಲೇ ಆಫ್ ಕನಸು ಭಗ್ನ

Mumbai: UP Warriorz player Grace Harris plays a shot against Gujarat Giants during the Women's Premier League T20 cricket match between UP Warriorz and Gujarat Giants, at Brabourne Stadium in Mumbai, Monday, March 20, 2023. (PTI Photo/Shashank Parade)(PTI03_20_2023_000295B)

Share on FacebookShare on TwitterShare on WhatsAppShare on Telegram

ಗ್ರೇಸ್ ಹ್ಯಾರಿಸ್ ಅವರ ಸೋಟಕ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ. ಆರ್‍ಸಿಬಿ ಟೂರ್ನಿಯಿಂದ ಹೊರ ಬಿದ್ದಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್  ಪ್ರವೇಶಿಸಿದ್ದವು.ಇದೀಗ ಯುಪಿ ವಾರಿಯರ್ಸ್ ಮೂರನೆ ತಂಡವಾಗಿ ಪ್ರವೇಶಿಸಿದೆ. ಆರ್‍ಸಿಬಿ ಹಾಗು ಗುಜರಾತ್ ಜೈಂಟ್ಸ್ ಪ್ಲೇ ಆಫ್ಗೆ ಹೋಗುವಲ್ಲಿ ವಿಫಲವಾಗಿದೆ.

ಬ್ರೇಬೋರ್ನ್ ಮೈದಾನದಲ್ಲಿ ನಡೆದ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಯುಪಿ ವಾರಿಯರ್ಸ್ 19.5 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಆರಂಭಿಕರಾದ ಸೋಫಿಯಾ ಡಂಕ್ಲಿ (23ರನ್), ಲಾರಾ ವೋಲ್ವಡ್ರ್ತ್ (17ರನ್)ಮೊದಲ ವಿಕೆಟ್‍ಗೆ 41 ರನ್ ಸೇರಿಸಿದರು. ಹರ್ಲಿನ್ ಡಿಯೊಲ್ (4ರನ್)ಬೇಗನೆ ಪೆವಿಲಿಯನ್ ಸೇರಿದರು.

50ರನ್‍ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಡಿ.ಹೇಮಲತಾ ಹಾಗೂ ಆಶ್ಲೆ ಗಾರ್ಡನರ್ 93 ರನ್‍ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಹೇಮಲತಾ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಗರ್ಡನರ್ 35 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.  ಹೇಮಾಲತಾ 57, ಆಶ್ಲೆ ಗಾರ್ಡನರ್ 60 ರನ್ ಹೊಡೆದು ಪಾರ್ಶವಿ ಚೋಪ್ರಾಗೆ ವಿಕೆಟ್ ಒಪ್ಪಿಸಿದರು.

ಸುಶ್ಮಾ 8, ಅಶ್ವಿನಿ 5, ಲಕಿಮ್ ಗಾರ್ತ್ ಅಜೇಯ 1 ರನ್ ಗಳಿಸಿದರು.  ಗುಜರಾತ್ ಪರ ರಾಜೇಶ್ವರಿ ಗಾಯಕ್ವಾಡ್ 39ಕ್ಕೆ 2, ಪಾರ್ಶವಿ 29ಕ್ಕೆ 2 ವಿಕೆಟ್ ಪಡೆದರು.

179 ರನ್ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಆರಂಭಿಕರಾದ ದೇವಿಕಾ ವೈದ್ಯ(7 ರನ್), ಅಲಿಸ್ಸಾ ಹೀಲಿ (12 ರನ್) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.  ಕಿರಣ್ ನಾವ್ಗಿರೆ (4ರನ್) ಗಳಿಸಿದರು.

ನಾಲ್ಕನೆ ವಿಕೆಟ್‍ಗೆ ಜತೆಗೂಡಿದ ತಾಹೀಲಾ ಮೆಕ್‍ಗ್ರೆತ್ ಹಾಗೂ ಗ್ರೇಸ್ ಹ್ಯಾರಿಸ್ 768 ರನ್‍ಗಳ ಜೊತೆಯಾಟ ನೀಡಿ ಪಂದ್ಯಕ್ಕೆ ತಿರುವು ನೀಡಿದರು.

ತಾಹೀಲಾ ಮೆಕ್‍ಗ್ರೆತ್ 34 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ತಾಹೀಲಾ ಮೆಕ್‍ಗ್ರೆತ್ (46 ಎಸೆತ, 11 ಬೌಂಡರಿ) 57 ರನ್ ಗಳಿಸಿ ಗಾರ್ಡನರ್‍ಗೆ ವಿಕೆಟ್ ಒಪ್ಪಿಸಿದರು.  ದೀಪ್ತಿ ಶರ್ಮಾ 6 ರನ್, ಗ್ರೇಸ್ ಹ್ಯಾರಿಸ್ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಒಟ್ಟು 61 ಎಸೆತದಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿ 72 ರನ್ ಹೊಡೆದರು.  ಕೊನೆಯಲ್ಲಿ ಏಕಾಂಗಿ ಹೋರಾಟ ಮಾಡಿದ ಸೋಫಿ ಎಕ್ಲಾಸ್ಟೊನ್  ಅಜೇಯ 19 ರನ್ ಹೊಡೆದು ಇನ್ನು ಒಂದು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಗುಜರಾತ್ ಪರ ಕಿಮ್ ಗಾರ್ತ್ 2, ಮೋನಿಕಾ ಪಟೇಲ್, ಆಶ್ಲಕೆ ಗಾರ್ಡನರ್ 1, ತನುಜಾ ಕಾನ್ವಾರ್ ತಲಾ 1 ವಿಕೆಟ್ ಪಡೆದರು.

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: Dayalan HemalathaGrace HarrisGujrat giantsplayoffsTahlia McGrathUP WarriorzWomen's Premier League
ShareTweetSendShare
Next Post
Womens World Boxing Championship ಕ್ವಾರ್ಟರ್ ಫೈನಲ್‍ಗೆ ಲವ್ಲಿನಾ, ಸಾಕ್ಷಿ ಚೌಧರಿ

Womens World Boxing Championship ಕ್ವಾರ್ಟರ್ ಫೈನಲ್‍ಗೆ ಲವ್ಲಿನಾ, ಸಾಕ್ಷಿ ಚೌಧರಿ

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram