ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೋರ್ಗಹೈನ್ ಹಾಗೂ ಸಾಕ್ಷಿ ಚೌಧರಿ ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಕದನದಲ್ಲಿ ಸಾಕ್ಷಿ (54ಕೆಜಿ), ಹಾಗೂ ಲವ್ಲಿನಾ (75 ಕೆಜಿ) 5-0 ಅಂಕಗಳಿಂದ ಅವಿರೋಧವಾಗಿ ಗೆದ್ದರು.
ತಾರಾ ಮಹಿಳಾ ಬಾಕ್ಸರ್ ಲವ್ಲಿನಾ ಮೆಕ್ಸಿಕೊದ ವಾನೆಸ್ಸಾ ಒರಿಟ್ಜ್ ವಿರುದ್ಧ ಗೆದ್ದರು. ಹೊಸ ವಿಭಾಗ (75ಕೆ,ಜಿ) ಪದಕ ಗೆಲುವಿನತ್ತ ಸಾಗಿದ್ದಾರೆ.
ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಲವ್ಲಿನಾ ಎದುರಾಳಿ ವಿರುದ್ಧ ರಕ್ಷಣಾತ್ಮಕವಾಗಿ ಆಡಿದರು. ಲವ್ಲಿನಾ ಎದುರಾಳಿ ಬಾಕ್ಸರ್ಗಿಂತ ಎತ್ತರ ಇದ್ದಿದ್ದರಿಂದ ದಾಳಿ ಮಾಡಿ ಪ್ರಾಬಲ್ಯ ಮೆರೆದರು.
ಕ್ವಾರ್ಟರ್ ಫೈನಲ್ಗೆ ಸಾಕ್ಷಿ ಪ್ರವೇಶ
ಭಾರತದ ಬಾಕ್ಸರ್ ಸಾಕ್ಷಿ (51ಕೆಜಿ) ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
2021ರ ಏಷ್ಯನ್ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತೆ ಸಾಕ್ಷಿ ಕಜಕಿಸ್ತಾನದ ಜಾಜಿರಾ ಉರಾಕ್ಬಾಯೆವಾ ವಿರುದ್ಧ 5-0 ಅಂಕಗಳಿಂದ ಅವಿರೋಧವಾಗಿ ಗೆದ್ದರು.
ಆಕ್ರಮಣಕಾರಿಯಾಗಿ ಆಡಿದ ಸಾಕ್ಷಿ ಎದುರಾಳಿಗೆ ಬಲವಾದ ಪಂಚ್ಗಳನ್ನು ಕೊಟ್ಟು ಗೆದ್ದರು.
ನಿರೀಕ್ಷೆಗೂ ಮೀರಿ ನಾನು ಚೆನ್ನಾಗಿ ಆಡಿದ್ದೇನೆ. ನನ್ನ ಎದುರಾಳಿ ಒಳ್ಳೆಯ ಬಾಕ್ಸರ್, 19-20 ಅಂಕಗಳಾಗಬಹುದೆಂದು ಭಾವಿಸಿದ್ದೆ ಆದರೆ ಪಂದ್ಯ ನನ್ನ ಪರವಾಗಿದ್ದರಿಂದ ಪ್ರಾಬಲ್ಯ ಮೆರೆದರು.