ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ಇಂದು ನಡೆಯಲಿದ್ದು ಪ್ರಶಸ್ತಿಗಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ.
ಇಲ್ಲಿನ ಬ್ರೇಬೋರ್ನ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹರ್ಮನ್ಪ್ರೀತ್ ಕೌರ್ ಫಾರ್ಮ್ ಮುಂಬೈ ತಂಡಕ್ಕೆ ಚಿಂತೆಗೀಡು ಮಾಡಿದೆ.
ಟೂರ್ನಿಯಲ್ಲಿ ಹರ್ಮನ್ಪ್ರೀತ್ ಅರ್ಧ ಶತಕ ಸಿಡಿಸಿದ ನಂತರ ಹರ್ಮನ್ಪ್ರೀತ್ ಲಯದಲ್ಲಿಲ್ಲ. ಮೊನ್ನೆ ಎಲಿಮಿನೇಟರ್ ಪಂದ್ಯದಲ್ಲಿ ನಾಟ್ ಸೀವರ್ ಅಜೇಯ 72 ರನ್ ಹೊಡೆಯದ್ದೆ ಇದ್ದಿದ್ದರೆ ಪಂದ್ಯದ ಗತಿಯೆ ಬದಲಾಗುತ್ತಿತ್ತು.
ಹರ್ಮನ್ಪ್ರೀತ್ ಕೌರ್ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಲಾಭವಾಗಲಿದೆ. ಟೂರ್ನಿಯಲ್ಲಿ ನಿಧಾನಗತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಗ್ರಸ್ಥಾನಕ್ಕೇರಿತು. ನಾಯಕಿ ಮೆಗ್ ಲಾನ್ನಿಂಗ್ ಹಾಗೂ ಆಲ್ರೌಂಡರ್ ಮಾರಿಜಾನ್ನೆ ಕಾಪ್ ಅವರ ಪ್ರದರ್ಶನ ಕೂಡ ತಂಡದ ಯಶಸ್ಸಿಗೆ ಕಾರಣವಾಯಿತು. ಹೀಗಿದ್ದರೂ ಉಭಯ ತಂಡಗಳಲ್ಲಿ ಯಾವುದು ಪ್ರಶಸ್ತಿ ಗೆಲುವ ತಂಡ ಎಂದು ಹೇಳಲಾಗುತ್ತಿಲ್ಲ. ಗುಂಪು ಹಂತದಲ್ಲಿ ಎರಡೂ ತಂಡಗಳು ಸಮಬಲದ ಪೈಪೋಟಿ ನೀಡಿ ತಲಾ 12 ಅಂಕಗಳನ್ನು ಪಡೆದಿವೆ. ನೆಟ್ ರನ್ ರೇಟ್ ಮಾತ್ರ ವ್ಯತ್ಯಾಸ ಮಾಡಿವೆ.
ಬ್ರೇಬೋರ್ನ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಳ್ಳೆಯ ಪ್ರದರ್ಶನ ನಿಡಿದೆ. ಆಡಿದ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಡೆಲ್ಲಿ ತಂಡ ಎರಡುಪಂದ್ಯಗಳನ್ನು ಗೆದ್ದು ಒಂದರಲ್ಲಿ ಸೋತಿದೆ. ಆಲ್ರೌಂಡರ್ ನಾಟ್ ಸೀವರ್ ಟೂರ್ನಿಯಲ್ಲಿ 9 ಪಂದ್ಯಗಳಿಂದ 272 ರನ್, 2 ಶತಕ, 54.40 ಸರಾಸರಿ, 10 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಮತ್ತೋರ್ವ ಮುಂಬೈ ಆಲ್ರೌಂಡರ್ ಹೇಯ್ಲಿ ಮ್ಯಾಥೀವ್ಸ್ (258 ರನ್, 13 ವಿಕೆಟ್, 9 ಪಂದ್ಯ) ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸಾಯಿಕಾ ಇಷ್ಕ್ (15 ವಿಕೆಟ್) ಟೂರ್ನಿಯಲ್ಲಿ ಅತಿ ವಿಕೆಟ್ ಪಡೆದ ಸಾಧನೆ ಮಾಡಬಹುದಾಗಿದೆ. ಇಸಾಬೆಲ್ಲಾ ವಾಂಗ್ (13 ವಿಕೆಟ್), ಅಮೆಲಿಯಾ ಕೆರ್ರ್ (12 ವಿಕೆಟ್ ) ಪಡೆದಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಗ್ ಲಾನ್ನಿಂಗ್ ಇತ್ತೀಚೆಗಷ್ಟೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದಿದ್ದರು. ಇದೀಗ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಗೆಲ್ಲುವ ಅವಕಾಶ ದೊರೆತಿದೆ. ಲಾನ್ನಿಂಗ್ 2 ಅರ್ಧ ಶತಕ 310 ರನ್ (51.66 ಸರಾಸರಿ) ಹೊಡೆದಿದ್ದಾರೆ. ಆಲ್ರೌಂಡರ್ ಮಾರಿಜನ್ನೆ ಕಾಪ್ (159 ರನ್, 9 ವಿಕೆಟ್, 8ಪಂದ್ಯ). ಅಲೈಸಿ ಕ್ಯಾಪ್ಸಿ ಮಧ್ಯಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ.
ಸಂಭಾವ್ಯ ತಂಡಗಳು:
ಮೆಗ್ ಲಾನ್ನಿಂಗ್ (ನಾಯಕಿ), ಜೆಮಿಮಾ ರಾಡ್ರಿಗಸ್, ಶಾಲಿ ವರ್ಮಾ, ಅಅಲೈಸೆ ಕ್ಯಾಪ್ಸಿಘಿ, ರಾಧಾ ಯಾದವ್, ಶಿಖಾ ಪಾಂಡೆ, ಮಾರಿಜಾನ್ನೆ ಕಾಪ್, ಟಿತಾಸ್ , ಲಾರಾ ಹ್ಯಾರಿಸ್, ತಾರಾ ನೋರಿಸ್, ಜಾಸಿಯಾ ಅಖ್ತರ್, ಮಿನು ಮಾಣಿ, ತನಿಯಾ ಭಾಟಿಯಾ(ವಿಕೆಟ್ ಕೀಪರ್), ಪೂನಮ್ ಯಾದವ್, ಜೆಸ್ ಜೊನ್ನಾಸ್ಸೆನ್, ಸ್ನೇಹ ದೀಪ್ತಿ, ಅರುಂಧತಿ ರೆಡ್ಡಿ , ಅಪರ್ಣಾ ಮೊಂಡಾಲ್.
ಮುಂಬೈ ಇಂಡಿಯನ್ಸ್:
ಹರ್ಮನ್ಪ್ರೀತ್ ಕೌರ್(ನಾಯಕಿ), ನಾಟ್ ಸೀವರ್, ಅಮೆಲಿಯಾ ಕೆರ್ರ್ಘಿ, ಪೂಜಾ ವಸಕಾರ್, ಯಸ್ತಿಕಾ ಭಾಟಿಯಾ, ಹೀಥರ್ ಗ್ರಾಹಂ, ಇಸಬೆಲ್ಲಾ ವಾಂಗ್, ಅಮನ್ಜೋತ್ ಕೌರ್,ಗುಜ್ಜರ್, ಸಾಯಿಕಾ ಇಷ್ಕ್, ಹೇಯ್ಲಿ ಮ್ಯಾಥೀವ್ಸ್, ಚೋಲೆ ಟ್ರಿಯಾನ್, ಹುಮಾರಿಯಾ ಕಾಝಿ, ಕೋಮಲ್ ಜಾನಜಾದ್, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ನೀಲಂ ಬಿಷ್ಟ್, ಜಿಂತಾಮಣಿ ಕಾಲಿಟಾ.