ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ ಒಂದೇ ಓವರ್ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಎ ದರ್ಜೆ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಋತುರಾಜ್ ಈ ಸಾಧನೆ ಮಾಡಿದರು. ಸ್ಪಿನ್ನರ್ ಶಿವಾ ಸಿಂಗ್
ಅವರ 49ನೇ ಓವರ್ನಲ್ಲಿ 7 ಸಿಕ್ಸರ್ ಚಚ್ಚಿದರು.ಮೊದಲ ಎಸೆತವನ್ನು ಲಾಂಗ್ ಆನ್, ಎರಡನೆ ಎಸೆತ ಬೌಲರ್ನ ತಲೆ ಮೇಲೆ ಹೋಯಿತು. 3ನೇ ಎಸೆತ ಡೀಪ್ ಸ್ಕ್ವರ್ನತ್ತ ಹೋಯಿತು.4ನೇ ಎಸೆತ ಲಾಂಗ್ ಆಫ್ ನತ್ತ ಹೋಯಿತು. 5ನೇ ಎಸೆತದಲ್ಲಿ ಬೌಲರ್ ಗೆರೆ ದಾಟಿದ್ದರಿಂದ ನೋ ಬಾಲ್ ಆಗಿತ್ತು.ಲಾಂಗ್ ಆಫ್ ನತ್ತ ಚೆಂಡು ಸಿಕ್ಸರ್ ಗೆರೆ ದಾಟಿತು. ಫ್ರಿ ಹಿಟ್ನಲ್ಲಿ ಚೆಂಡ್ ಅನ್ನ ಲಾಂಗ್ ಆನ್ ನತ್ತ ಸಿಕ್ಸರ್ ಹೊಡೆದು ದ್ವಿಶತಕ ಪೂರೈಸಿದರು.ಕೊನೆಯ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಚೆಂಡನ್ನು ಸಿಕ್ಸರ್ ಗೆ ಅಟ್ಟಿದರು.
ಎ ದರ್ಜೆ ಕ್ರಿಕೆಟ್ನಲ್ಲಿ ಒಂದೇ ಓವ ರ್ನಲ್ಲಿ ಎರಡನೆ ಬಾರಿಗೆ 43 ರನ್ ದಾಖಲಾಗಿದೆ. 2018ರ ನ್ಯೂಜಿಲೆಂಡ್ ದೇಸಿ ಟೂರ್ನಿಯಲ್ಲಿ ನಾರ್ದನ್ ಡಿಸ್ಟ್ರಿಕ್ಟ್ನ ಬ್ರೆಟ್ ಹಾಂಪ್ಟನ್ –ಜೋ ಕಾರ್ಟರ್ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡದ ವಿಲಿಯಮ್ ಲೂಡಿಕರ್ ಒವರ್ನಲ್ಲಿ 43 ರನ್ ಹೊಡೆದಿದ್ದರು.
ಋತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ನಲ್ಲಿ 16 ಸಿಕ್ಸರ್ ಗಳಿದ್ದವು. ಇದು ವಿಜಯ್ ಹಜಾರೆಯಲ್ಲಿ ಹೊಸ ದಾಖಲೆಯಾಗಿದೆ. ಎನ್.ಜಗದೀಶನ್ ಅವರ 15 ಸಿಕ್ಸರ್ ದಾಖಲೆಯನ್ನು ಮುರಿದಿದ್ದಾರೆ. ಎ ದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಜೊತೆ ಜಂಟಿ ಮೊದಲ ಸ್ಥಾನ ಪಡೆದರು.