ಫಿಫಾ ವಿಶ್ವಕಪ್ನ ದೈತ್ಯರಾದ ಸ್ಪೇನ್ ಮತ್ತು ಜರ್ಮನಿ ನಡುವಿನ ಕದನ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯ ಕಂಡಿದೆ.ಇದರೊಂದಿಗೆ ಜರ್ಮನಿ ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿದೆ.
ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲ ಅವಧಿಯಲ್ಲಿ ಎರಡೂ ತಂಡಗಳು ಜಿದ್ದಿಗೆ ಬಿದ್ದಿದ್ದರಿಂದ ಯಾವುದೇ ಗೋಲುಗಳು ದಾಖಲಾಗಲಿಲ್ಲ.
ಆದರೆ 62ನೇ ನಿಮಿಷದಲ್ಲಿ ಸ್ಪೇನ್ ತಂಡದ ಅಲ್ವೊರೊ ಮೊರಾಠಾ ಗೋಲು ಹೊಡೆದರು.ನಂತರ 83ನೇ ನಿಮಿಷದಲ್ಲಿ ಬದಲಿ ಆಟಗಾರ ನಿಕ್ಲಾಸ್ ಫುಲ್ಕ್ರುಗ್ ಗೋಲು ಹೊಡೆದು ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. ಈ ಪಂದ್ಯವನ್ನು ಜರ್ಮನಿ ಡ್ರಾ ಮಾಡಿಕೊಂಡಿದ್ದರೂ ಗುಂಪು ಹಂತದಿಂದ ಹೊರಬೀಳುವ ಆತಂಕ ಇನ್ನು ದೂರವಾಗಿಲ್ಲ.
ಸ್ಪೇನ್ ಈ ಪಂದ್ಯದಲ್ಲೂ ದಾಖಲೆ ಬರೆದಿದೆ. 1988ರ ಯೂರೋಪಿಯನ್ ಚಾಂಪಿಯನ್ಶಿಪ್ನ ಬಳಿಕ ದೊಡ್ಡ ಟೂರ್ನಿಗಳಲ್ಲಿ ಜರ್ಮಿನಿ ವಿರುದ್ಧ ಸ್ಪೇನ್ ಸೋತಿಲ್ಲ.