ಜೆಮಿಮಾ ರಾಡ್ರಿಗಸ್ (ಅಜೇಯ 75ರನ್) ಅವರ ಅತ್ಯದ್ಭುತ ಬ್ಯಾಟಿಂಗ್ ನೆರೆವಿನಿಂದ ಭಾರತ ವನಿತೆಯರ ತಂಡ ಯುಎಇ ವಿರುದ್ಧ 104 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಹರ್ಮನ್ ಪಡೆ ಅಗ್ರಸ್ಥಾನ ಪಡೆಯಿತು.
ಬಾಂಗ್ಲಾದೇಶದ ಸಿಲೆಟ್ ನಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್ ಪ್ರೀತ್ ಪಡೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು. ಯುಎಇ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು.
ಭಾರತ ಪರ ಎಸ್.ಮೇಘನಾ 10, ರಿಚಾ ಘೋಷ್ 0, ದೀಪ್ತಿ ಶರ್ಮಾ 64, ಜೆಮಿಮಾ ರಾಡ್ರಿಗಸ್ 45 ಎಸತೆದಲ್ಲಿ 11 ಬೌಂಡರಿಯೊಂದಿಗೆ ಅಜೇಯ 75 ರನ್ ಸಿಡಿಸಿದರು. ಪೂಜಾ ವಸ್ತ್ರಾಕಾರ್ 13, ಕಿರಣ್ ಪ್ರಭು 10 ರನ್ ಗಳಿಸಿದರು.
179 ರನ್ ಗುರಿ ಬೆನ್ನತ್ತಿದ ಯುಎಇ ತಂಡದ ಪರ ತೀರ್ಥ ಸತೀಶ್ 1, ಎಶಾ ಘೋಷ್ 4, ಕವೀಶಾ ಎಗೊಡಾಗೆ ಅಜೇಯ 30 ರನ್, ಖುಷಿ ಶರ್ಮಾ 29 ರನ್ ಗಳಿಸಿದರು. ಭಾರತ ಪರ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 20ಕ್ಕೆ 2 ವಿಕೆಟ್ ಪಡೆದರು.